ಬಂಟ್ವಾಳ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರವಧಿಯಲ್ಲಿ ಜಾರಿಗೊಳಿಸಿದ ಜನೋಪಯೋಗಿ ಯೊಜನೆಗಳನ್ನು ಸ್ಥಗಿತಗೊಳಿಸಿ ಜನರನ್ನು ಕತ್ತಲೆಯಲಿಸಿದೆ. ಸಿದ್ದರಾಮಯ್ಯ ನೇತ್ರತ್ವದದ ಸರಕಾರ ನಿದ್ದೆಮಾಡುತ್ತಿದೆ ಎಂದು ಮಾಜಿ ನಗರಾಭಿವೃದ್ಧಿ ಸಚಿವ ಎಂದು ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಅವರು ಬಂಟ್ಟವಾಳದಲ್ಲಿ ಕಾರ್ಯಕರ್ತ ಸಮಾವೇಷವನ್ನು ಉದ್ಘಾಟಿಸಿ ಮಾತನಾಡುತ್ತಾ ಸಚಿವ ಆಂಜನೇಯ ಅವರ ಮನೆಯಲ್ಲಿ ಭ್ರಷ್ಟಾಚಾರ ನಡೆದರೂ ಅವರನ್ನು ಸಂಪಟದಿಂದ ಕೈಬಿಟ್ಟಿಲ್ಲ. ಲೋಕಾಯಕ್ತರ ನೇಮಕಾತಿಗೆ ಮೀನಾಮೇಷ ಎಣಿಸುತ್ತಿದೆ. ಉಪಲೋಕಾಯಕ್ತರ ಹುದ್ದಗೆ ನೇಮಕಾತಿಗೆ ಸರಕಾರದ ನಿಲುವಿನಲ್ಲಿ ನಿರಾಸಕ್ತಿ. ಸಚಿವರ ದೂರವಾಣಿ ಕರೆ ಸ್ವೀಕರಿಸಿದಿದ್ದದಕ್ಕೆ ಅಧಿಕಾರಿಗೆ ವರ್ಗಾವಣೆ ಇವೆಲ್ಲಾ ಸರಕಾರ ಅಹಂಕಾರ, ಉದಾಸೀನ ಹಾಗೂ ನಿದ್ರಾವಸ್ಥೆಯಲ್ಲಿರುವುದನ್ನು ತೋರಿಸುತ್ತದೆ. ಆದುದರಿಂದ ದ.ಕ. ಜಿಲ್ಲಾ ಪಂಚಾಯತ್ನಲ್ಲಿ 30 ಕ್ಕೆ 30 ಸ್ಥಾನಗಳಿಸಿ ಸರಕಾರಕ್ಕೆ ತಕ್ಕ ಉತ್ತರ ನೀಡಬೇಕೆಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರೈತರ ಬಗ್ಗೆ ಸರಕಾರ ನಿರ್ಲಕ್ಷ ಧೋರಣೆ ತಳೆದಿದ್ದು ಕೇರಳ ಮಾದರಿಯಲ್ಲಿ ರೈತರಿಗೆ ಕೇಂದ್ರ ದಿಂದ ಸೂಕ್ತ ಪ್ಯಾಕೇಜ್ ಕೊಡಿಸುವಲ್ಲಿ ರಾಜ್ಯ ಎಡವಿದೆ. ದ.ಕ ಮತ್ತು ಕೋಲಾರ ಜಿಲ್ಲಾಗಳಿಂದ ವಿರೋಧ ವ್ಯಕ್ತವಾಗುತ್ತಿದ್ದರು ಎತ್ತಿನಹೊಳೆಯೋಜನೆಗೆ ಸರಕಾರ ಏಕೆ ಹೆಚ್ಚಿನ ಆಸಕ್ತಿ ತೋರುತ್ತಿದೆ. 13000ಕೋಟಿ ರೂ ಯೋಜನೆಯಲ್ಲಿ ಭೃಷ್ಟಾಚಾರ ನಡೆದಿದೆ. ಇದರ ಬಗ್ಗೆ ಹೋರಾಟ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಹಣ , ಹೆಂಡ, ಅಪಪ್ರಚಾರ ಮೂಲಕ ಜನರನ್ನು ಮತ್ತು ಮತದಾರರನ್ನು ಒಲೈಸುವ ಕಾರ್ಯನಡೆಯಬಹುದು ಈ ಬಗ್ಗೆ ನಮ್ಮ ಕಾರ್ಯಕತರು ಎಚ್ಚರಿಗೆ ವಹಿಸಬೇಕು ಎಂದು ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ತಿಳಿದ್ದಾರೆ.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಮೂವರು ಸಚಿವರು ಮತ್ತು ಏಳು ಮಂದಿ ಶಾಸಕರು ಇದ್ದರೂ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಹತ್ಯೆಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆಯಲ್ಲಿ ಹಳಿತಪ್ಪಿದು ಜಂಗಲ್ ರಾಜ್ಯದಂತೆ ನಡೆಯುತ್ತಿದೆಎಂದು ಆರೋಪಿಸಿದರು. ಇದೇ ಸಂದರ್ಭ ಪುಷ್ಪರಾಜ್ ಬೆಳ್ತಂಗಡಿ ಬಿಜೆಪಿಗೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣ ಪಾಲೆಮಾರ್, ಶಾಸಕ ಅಂಗಾರ, ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಎನ್. ಯೋಗೀಶ ಭಟ್, ಕೆ. ಪದ್ಮನಾಭ ಕೊಟ್ಟಾರಿ, ಕುಂಬ್ಳೆ ಸುಂದರ ರಾವ್, ಕೆ. ಜಯರಾಮ ಶೆಟ್ಟಿ, ಬಾಲಕೃಷ್ಣ ಭಟ್, ಕೆ. ಪ್ರಭಾಕರ ಬಂಗೇರ, ಕೆ. ಮೋನಪ್ಪ ಭಂಡಾರಿ, ಮಲ್ಲಿಕಾ ಆರ್. ಪ್ರಸಾದ್, ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಗಣೇಶ ರಾವ್, ಪ್ರಭಾ ಮಾಲಿನಿ ಜಯರಾಮ ಶೆಟ್ಟಿ, ಕೆ.ಟಿ. ಶೈಲಜಾ ಭಟ್, ಕೊರಗಪ್ಪ ನಾಯ್ಕ್, ಎನ್. ಯೋಗೀಶ್ ಭಟ್, ಮಲ್ಲಿಕಾ ಪ್ರಸಾದ್, ಬಾಲಕೃಷ್ಣ ಭಟ್, ಪ್ರಭಾ ಮಾಲಿನಿ ಮೊದಲಾದವರು ಉಪಸ್ಥಿತರಿದ್ದರು. ಸಂಜೀವ ಮಠಂದೂರು ಅವರು ಸ್ವಾಗತಿಸಿ ದರು. ದೇವದಾಸ್ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.