ಲಂಡನ್: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈಪೆ ವಾಯುನೆಲೆಯ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಬಗ್ಗೆ ಸಾಕ್ಷಿಗಳುಳ್ಳ ತೈವಾನ್ ಅಧಿಕಾರಿಯೊಬ್ಬರು ನೀಡಿದ ವಿವರಗಳನ್ನು ಬ್ರಿಟನ್ನ www.bosefile.info ವೆಬ್ಸೈಟ್ ಬಿಡುಗಡೆ ಮಾಡಿದೆ.
ಬ್ರಿಟನ್ ವಿದೇಶ ಕಾರ್ಯಾಲಯದಲ್ಲಿ ೧೯೫೬ರಷ್ಟು ಹಳೆಯ 1852/6 ಕಡತದಲ್ಲಿ ಬೋಸ್ ಅಂತ್ಯಕ್ರಿಯೆ ನಡೆಸಿರುವ ಬಗ್ಗೆ ತೈವಾನ್ ಅಧಿಕಾರಿ ನೀಡಿರುವ ಸಾಕ್ಷ್ಯಗಳನ್ನು ಒಳಗಂಡ ಅಂಶ ದೊರೆತಿದೆ.
ತೈಪೆಯಲ್ಲಿ ಪಾರ್ಥಿವ ಶರೀರಗಳ ಅಂತ್ಯಕ್ರಿಯೆಗೆ ಅನುಮತಿ ನೀಡುವ ತೈವಾನ್ ಅಧಿಕಾರಿ ತಾನ್ ತೀ ತೀ ಸ್ವತಃ ನೇತಾಜಿ ಅವರ ಅಂತ್ಯಕ್ರಿಯೆ ನಡೆಸಿರುವ ಬಗ್ಗೆ ತಿಳಿಸಿದ್ದು, ವಿಮಾನ ಅಪಘಾತದಲ್ಲಿ ಬೋಸ್ ಮೃತಪಟ್ಟಿರುವ ಬಗ್ಗೆ ಸಾಬೀತುಪಡಿಸುವಂತೆ ಬ್ರಿಟನ್ ವೆಬ್ಸೈಟ್ ಬಹಿರಂಗಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.