ಹನ್ನೋವರ್: ಜರ್ಮನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಲ್ಲಿನ ಹನ್ನೋವರ್ ಟ್ರೇಡ್ ಫೇರ್ಗೆ ಭೇಟಿ ನೀಡಿದರು. ಅಲ್ಲಿ ಅವರು ಇಂಡಿಯನ್ ಪೆವಿಲಿಯನ್ ಉದ್ಘಾಟಿಸಿದರು. ಅಲ್ಲದೇ ಜರ್ಮನ್ ಚಾನ್ಸೆಲರ್ ಅಂಜೇಲಾ ಮಾರ್ಕೆಲ್ ಅವರೊಂದಿಗೆ ‘ಚಾಯ್ ಪೇ ಚರ್ಚಾ’ ನಡೆಸಿದರು.
ಭಾರತದ 14 ರಾಜ್ಯಗಳು ಈ ಬಾರಿಯ ಹನ್ನೋವರ್ ಟ್ರೇಡ್ ಫೇರ್ನಲ್ಲಿ ಭಾಗವಹಿಸುತ್ತಿವೆ. ಭಾರತದ ಒಟ್ಟು 400 ಕಂಪನಿಗಳು ಪಾಲ್ಗೊಳ್ಳುತ್ತಿವೆ. ಈ ಫೇರ್ನ ಭಾಗವಾಗಿ ಭಾರತವನ್ನು ಆಹ್ವಾನಿಸಿರುವುದಕ್ಕೆ ಮೋದಿ ಜರ್ಮನಿಗೆ ಧನ್ಯವಾದವನ್ನು ಸಲ್ಲಿಸಿದರು.
ಈ ವೇಳೆ ಭಾರತದ ಸೆಲಿಬ್ರಿಟಿ ಚೆಫ್ಗಳು ಭಾರತದ ಮ್ಯಾಂಗೋ ಲಸ್ಸಿಯನ್ನು ಮಾರ್ಕೆಲ್ ಅವರಿಗೆ ನೀಡಿದರು. ಸಿದ್ಧಪಡಿಸಿದ ಖಾಂಡ್ವಿಸ್, ಧೋಕ್ಲಾ ಮತ್ತು ಖಕ್ರಾಸ್ಗಳನ್ನು ಮೋದಿಗೆ ಬಡಿಸಲಾಯಿತು. ಇಂಡಿಯನ್ ಪೆವಿಲಿಯನ್ ಉದ್ಘಾಟಿಸಿದ ಬಳಿಕ ಮೋದಿ ಮತ್ತು ಮಾರ್ಕೆಲಾ ಅವರು ಟೀ ಹೀರುತ್ತಾ ಮಾತುಕತೆ ನಡೆಸಿದರು. ಭಾರತದ ಪೆವಿಲಿಯನ್ ಹಿಂದುಗಡೆ ಮೇಕ್ ಇನ್ ಇಂಡಿಯಾದ ಲೋಗೋ ಸಿಂಹವನ್ನು ರಚಿಸಲಾಗಿತ್ತು.
ಬಳಿಕ ಅವರು ಭಾರತೀಯ ಮೂಲದ ಸಿಇಓಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಂಜೆ ಬರ್ಲಿನ್ಗೆ ತೆರಳಿ ಭಾರತೀಯ ಸಮುದಾಯದವರನ್ನು ಭೇಟಿಯಾಗಲಿದ್ದಾರೆ. ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಸೂರ್ಯ ಬೋಸ್ ಅವರನ್ನೂ ಭೇಟಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.