ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆದ ಬಳಿಕ ದೇಶದ ಬಹುತೇಕ ಭಾಗದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಅಪಾರ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಆದರೆ ಇವರ ಬಳಿ ದಾಳಿಗಳನ್ನು ಎದುರಿಸಲು ಬೇಕಾದ ಸಮರ್ಪಕ ಅಸ್ತ್ರಗಳಿವೆಯೇ ಎಂಬುದೇ ದೊಡ್ಡ ಪ್ರಶ್ನೆ.
ದೆಹಲಿಯಲ್ಲಿರುವ 90 ಸಾವಿರ ಪೊಲೀಸರಿಗೆ ಕೇವಲ 250 ಬುಲೆಟ್ಪ್ರೂಫ್ ಜಾಕೆಟ್ಗಳಷ್ಟೇ ಇವೆ ಎಂಬ ಆಘಾತಕಾರಿ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ.
ಈ ಜಾಕೆಟ್ಗಳು 11 ಕೆ.ಜಿ ತೂಕವಿದ್ದು, ಒಂದು ಗಂಟೆ ಧರಿಸುವುದು ಕೂಡ ಕಷ್ಟವಾಗುತ್ತದೆ. ೨೫೦ ಜಾಕೆಟ್ಗಳಲ್ಲಿ ಅರ್ಧದಷ್ಟು ಜಾಕೆಟ್ಗಳನ್ನು ಹೈ ಸೆಕ್ಯೂರಿಟಿಯಲ್ಲಿ ಇರುವ ಸಿಬ್ಬಂದಿಗಳಷ್ಟೇ ತೊಡುತ್ತಾರೆ.
ಪಠಾನ್ಕೋಟ್ ದಾಳಿಯ ಬಳಿಕ ಇದೀಗ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಹೆಚ್ಚಿನ ಬುಲೆಟ್ ಪ್ರೂಫ್ ಜಾಕೆಟ್ಗಳನ್ನು ಖರೀದಿಸುವ ಪ್ರಕ್ರಿಯೆ ಆರಂಭಿಸಿದೆ.
5ಕೆ.ಜಿಗಿಂತ ಹೆಚ್ಚು ಭಾರವಿಲ್ಲದ, ರಸ್ತೆಯಲ್ಲಿ ನಿಲ್ಲುವ ಪೊಲೀಸರಿಗೆ ಅರ್ಧ ದಿಂದ 3ಕೆಜಿ ತೂಕದ ಜಾಕೆಟ್ಗಳನ್ನು ತಯಾರಿಸಲು ಕೋರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.