ವಾಷಿಂಗ್ಟನ್: 2016ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಹಿಲರಿ ಕ್ಲಿಂಟನ್ ಅವರು ಸ್ಪರ್ಧಿಸಲಿದ್ದಾರೆ. ಇದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಅವರು ಕಣಕ್ಕಿಳಿಯಲಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಬಿನ್ ಕ್ಲಿಂಟನ್ ಅವರ ಪತ್ನಿಯಾಗಿರುವ ಹಿಲರಿ ಅಮೆರಿಕದ ಮೊದಲ ಮಹಿಳೆಯಾಗಿ, ಯುಎಸ್ ಸೆನೆಟರ್ ಆಗಿ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಈ ಬಾರಿಯ ಬಲಿಷ್ಠ ಅಭ್ಯರ್ಥಿಯಾಗಿದ್ದರು, ಸ್ವತಃ ಬರಾಕ್ ಒಬಾಮ ಅವರೇ ಹಿಲರಿ ಅದ್ಭುತ ಅಧ್ಯಕ್ಷೆಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
೨೦೦೮ನೇ ಸಾಲಿನ ಚುನಾವಣೆಯಲ್ಲಿ ಬರಾಕ್ ಒಬಾಮ ಎದುರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಸ್ಥಾನ ಪಡೆಯುವಲ್ಲಿ ಹಿಲರಿ ವಿಫಲರಾಗಿದ್ದರು. ಈ ಬಾರಿ ಹಿಲರಿ ಅಭ್ಯರ್ಥಿ ಸ್ಥಾನಕ್ಕೆ ಮೇರಿ ಲ್ಯಾಂಡ್ನ ಮಾಜಿ ಗವರ್ನರ್ ಮಾರ್ಟಿನ್ ಒ ಮಲ್ಲೇಯ್ ಸೇರಿದಂತೆ ಹಲವರ ಸ್ಪರ್ಧೆ ಎದುರಿಸಬೇಕಿದ್ದರೂ, ಹಿಲರಿ ಅವರೇ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಉಮೇದುವಾರಿಕೆಯನ್ನು ಘೋಷಿಸಿದ ಕ್ಷಣದಿಂದಲೇ ಅವರು ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
‘ಅಮೆರಿಕನ್ನರಿಗೆ ಪ್ರತಿದಿನ ಚಾಂಪಿಯನ್ನರ ಅಗತ್ಯವಿದೆ. ಆ ಚಾಂಪಿಯನ್ ನಾನಾಗಲು ಬಯಸುತ್ತಿದ್ದೇನೆ’ ಎಂದು ಹಿಲರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.