ನವದೆಹಲಿ : ಪಾಕಿಸ್ಥಾನ ಸರಕಾರ ಭಾರತಕ್ಕೆ ಸಮಾಧಾನತರುವ ರೀತಿಯಲ್ಲಿ ಪಠಾನ್ಕೋಟ್ ವಾಯುನೆಲೆಯ ಮೇಲೆ ದಾಳಿ ನೆಡಸಿರುವ ಉಗ್ರಸಂಘಟನೆಯ ವಿರುದ್ಧ ಕಠಿಣ ಕ್ರಮಕೈಗೊಂಡ ಬಳಿಕವೆಷ್ಟೇ ಉಭಯ ದೇಶಗಳ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ತಿಳಿಸಿದ್ದಾರೆ.
“ದೈನಿಕ್ ಭಾಸ್ಕರ್’ ಹಿಂದಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಅಜಿತ್ ದೋವಾಲ್ ಅವರ ಸಂದರ್ಶನದಲ್ಲಿ ಈ ಮಾಹಿತಿ ಹೊರಬಿದಿದ್ದು ಪಾಕಿಸ್ಥಾನ ಉಗ್ರರ ವಿರುದ್ಧ ಕೈಗೊಂದಿರುವ ಕ್ರಮ ಭಾರತಕ್ಕೆ ಸಮಾಧಾನತರುವವರೆಗೂ ಮಾತುಕತೆಗಳನ್ನು ನಡೆಸುದಿಲ್ಲ ಎಂದುಹೇಳಿದ್ದಾರೆ.
ಆದರೆ ದೈನಿಕ್ ಭಾಸ್ಕರ್ ಪತ್ರಿಕೆ ಸಂದರ್ಶನದಲ್ಲಿ ತಾನು ಹೀಗೆ ಹೇಳಿಲ್ಲ ಬದಲಾಗಿ ತಾನು ಈ ವಿದೇಶ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ದಿನಾಂಕ ನಿಗದಿಯಾಗಿಲ್ಲ ಎಂದವರು ಹೇಳದ್ದಾರೆ. ನಾನು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಮತ್ತು ಅಂತಹ ಯಾವುದೇ ಸಂದರ್ಶನ ನೀಡಿರುವ ನೆನಪು ನನಗಿಲ್ಲ ಎಂದು ಹೇಳಿದ್ದಾಗಿ ಎಎನ್ಐ ಮೂಲಕ ಸ್ಟಷ್ಟಪಡಿಸಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.