ಚಂಡೀಗಢ: ಸೇನಾ ಸಮವಸ್ತ್ರದಂತಹ ಉಡುಗೆಗಳನ್ನು ತೊಡದಂತೆ ಭಾರತೀಯ ಸೇನೆ ನಾಗರಿಕರಿಗೆ ಸೂಚಿಸಿದೆ, ಮಾತ್ರವಲ್ಲದೇ ಬಟ್ಟೆ ವ್ಯಾಪಾರಿಗಳು ಕೂಡ ಇಂತಹ ಬಟ್ಟೆಗಳನ್ನು ಮಾರಾಟ ಮಾಡಬಾರದು ಎಂದು ತಿಳಿಸಿದೆ.
ಉಗ್ರರ ದಾಳಿಯನ್ನು ತಡೆಯುವ ಹಿನ್ನಲೆಯಲ್ಲಿ ಸೇನೆ ಸಾರ್ವಜನಿಕರಿಗೆ ಹೊಸ ಗೈಡ್ಲೈನ್ಗಳನ್ನು ಬಿಡುಗಡೆ ಮಾಡಿದೆ. ಈ ಗೈಡ್ಲೈನ್ ದೇಶದಾದ್ಯಂತ ಅನ್ವಯವಾಗಲಿದೆ.
ಸೇನಾ ಸಮವಸ್ತ್ರದಂತಹ ವಸ್ತ್ರಗಳನ್ನು ತೊಡುವುದು, ಸೇನೆಯಲ್ಲಿರುವ ರೀತಿಯ ಪರಿಕರಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಸೆಕ್ಯೂರಿಟಿ ಏಜೆನ್ಸಿಗಳು, ಪೊಲೀಸರು ಮತ್ತು ಇತರ ಕೇಂದ್ರೀಯ ಪಡೆಗಳು ಸೇನೆಯ ಸಮವಸ್ತ್ರದ ರೀತಿಯ ಉಡುಗೆಗಳನ್ನು ತೊಡಬಾರದು, ಇದು ಕಾನೂನಾತ್ಮಕ ಅಲ್ಲ ಮತ್ತು ತಪ್ಪು ಗ್ರಹಿಕೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದಿದ್ದಾರೆ.
ಸೇನಾ ಧಿರಿಸುಗಳನ್ನು ಮಾರಲು ಆಸಕ್ತರಾಗಿರುವ ವ್ಯಾಪಾರಿಗಳು ಮೊದಲು ಸ್ಥಳಿಯ ಮಿಲಿಟರಿ ಆಡಳಿತದ ಅನುಮತಿಯನ್ನು ಪಡೆಯಬೇಕು, ಆದರೆ ಅನಧಿಕೃತ ವ್ಯಕ್ತಿಗೆ ಸಮವಸ್ತ್ರ ಮಾರಾಟ ಮಾಡುವುದು ಅಪರಾಧ ಎಂದಿದೆ.
ಮಾಜಿ ಸೈನಿಕರು ಮತ್ತು ಸೈನಿಕ ಸಂಬಂಧಿಕರಿಗೆ ಕೂಡ ಮಿಲಿಟರಿ ಸಮವಸ್ತ್ರವನ್ನು ಧರಿಸದಂತೆ ಅದು ಮನವಿ ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.