ಸುಳ್ಯ: ಬೆಳ್ಳಿಪ್ಪಾಡಿ-ದೇವರಗುಂಡ ಮನೆತನದ ಆರನೇ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ಧರ್ಮದೈವ ಮತ್ತು ಪರಿವಾರ ದೈವಗಳ ನಡಾವಳಿ ಜರುಗಿತು.
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಕುಟುಂಬ ಸಮೇತರಾಗಿ ಆಗಮಿಸಿ ದೈವಗಳ ನಡಾವಳಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪ್ರದಾಯಗಳ ಆಚರಣೆಯಿಂದ ಬಾಂಧವ್ಯದ ವೃದ್ಧಿಯಾಗುತ್ತದೆ. ಮನೆತನದ ದೈವಗಳ ನಡಾವಳಿಯಲ್ಲಿ ಪ್ರತೀ ಬಾರಿಯೂ ತಪ್ಪದೆ ಭಾಗವಹಿಸುತ್ತೇವೆ. ಬೆಳ್ಳಿಪ್ಪಾಡಿ-ದೇವರಗುಂಡ ಕುಟುಂಬವು ದೊಡ್ಡ ಕುಟುಂಬವಾಗಿದ್ದು, ದೈವಗಳ ನಡಾವಳಿಯಲ್ಲಿ ಎಲ್ಲರೂ ಒಟ್ಟು ಸೇರುತ್ತಾರೆ. ಎಲ್ಲರನ್ನೂ ಒಟ್ಟು ಸೇರಿಸಲು ಕುಟುಂಬದ ಆಚರಣೆಗಳು ಸಹಾಯಕವಾಗುತ್ತದೆ ಎಂದರು.
ಎರಡು ದಿನಗಳ ಕಾಲ ನಡೆದ ನಡಾವಳಿಯಲ್ಲಿ ಶ್ರೀ ವರ್ಣಾರ ಪಂಜುರ್ಲಿ ದೈವದ ನಡಾವಳಿ, ಶ್ರೀ ಪಿಲಿಭೂತ ದೈವದ ನಡಾವಳಿ, ಶ್ರೀ ಪುರುಷ ಭೂತ ದೈವದ ನಡಾವಳಿ, ಶ್ರೀ ರುದ್ರಚಾಮುಂಡಿ ಧರ್ಮದೈವದ ನಡಾವಳಿ, ಶ್ರೀ ಗುಳಿಗ ದೈವದ ನಡಾವಳಿ ಮತ್ತು ಶ್ರೀ ಕೊರತಿ ದೇವತೆ ನಡಾವಳಿ ಜರುಗಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.