ಹನ್ನೋವರ್: ಫ್ರಾನ್ಸ್ ಪ್ರವಾಸವನ್ನು ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜರ್ಮನಿಗೆ ಬಂದಿಳಿದಿದ್ದಾರೆ. ಇಲ್ಲಿನ ಹನ್ನೋವರ್ನಲ್ಲಿ ನಡೆಯಲಿರುವ ಇಂಡೋ-ಜರ್ಮನ್ ಸಮಿತ್ನ್ನು ಅವರು ಸೋಮವಾರ ಉದ್ಘಾಟನೆಗೊಳಿಸಲಿದ್ದಾರೆ.
ನಿನ್ನೆ ಅವರು ಜರ್ಮನ್ ಚಾನ್ಸ್ಲೆರ್ ಅಂಜೇಲಾ ಮಾರ್ಕೆಲ್ ಅವರೊಂದಿಗೆ ವಿಶ್ವದ ಅತಿದೊಡ್ಡ ಕೈಗಾರಿಕಾ ಮೇಳ ಹನ್ನೋಬವರ್ ಮೆಸ್ಸೆಗೆ ಚಾಲನೆ ನೀಡಿದ್ದರು. ಈ ವೇಳೆ ಅವರು ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಭಾರತೀಯ ಮೂಲದವರಲ್ಲಿ ಮತ್ತು ಜರ್ಮನ್ ಜನತೆಯಲ್ಲಿ ಮನವಿ ಮಾಡಿಕೊಂಡರು.
ಬಳಿಕ ಬರ್ಲಿನ್ಗೆ ತೆರಳಿ ಅವರು ಭಾರತೀಯ ರಾಯಭಾರ ಕಛೇರಿ ಆಯೋಜಿಸಿರುವ ಕಮ್ಯೂನಿಟಿ ಮೀಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ, ಈ ವೇಳೆ ಅವರು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಸೂರ್ಯ ಚಂದ್ರ ಬೋಸ್ ಅವರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭ ನೆಹರೂ ಬೋಸ್ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ಪ್ರಸ್ತಾಪವಾಗುವ ಸಾಧ್ಯತೆ ಇದೆ.
ಜರ್ಮನ್ ಪ್ರವಾಸದ ಬಳಿಕ ಮೋದಿ ಕೆನಡಾಗೆ ಪ್ರಯಾಣ ಬೆಳೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.