ನವದೆಹಲಿ: ಕಚ್ಚಾ ತೈಲ ಬೆಲೆಗಳಲ್ಲಿ ಇಳಿಕೆ, ಭಾರತದ ಸಗಟು ಹಾಗೂ ಅಂಗಡಿ ಸಾಮಗ್ರಿಗಳ ಬೆಲೆ ಅಗ್ಗವಾಗಿದ್ದರೂ 2015ರಲ್ಲಿ ಮಧ್ಯಮ ವರ್ಗದ ಜನರಲ್ಲಿ ಯಾವುದೇ ಹರ್ಷೋದ್ಗಾರ ಕಾಣಸಿಕ್ಕಿಲ್ಲ.
ಮಧ್ಯಮ ವರ್ಗದ ಕುಟುಂಬಗಳು ತಮ್ಮ ಜೀವನಶೈಲಿಯ ಮಟ್ಟವನ್ನು ಸುಧಾರಿಸುವ ಸಲುವಾಗಿ ಲಕ್ಷಾಂತರ ಸೇವೆಗಳು ಮತ್ತು ಅನಗತ್ಯ ವಸ್ತುಗಳನ್ನು ಕೊಳ್ಳುವಲ್ಲಿ ಅರ್ಧಕ್ಕಿಂತ ಅಧಿಕ ಮಾಸಿಕ ಆದಾಯವನ್ನು ವ್ಯಯಿಸುತ್ತಿದ್ದಾರೆ. ಆದಾಯ ಮತ್ತು ಆಕಾಂಕ್ಷೆಗಳಲ್ಲಿ ಭಾಗಶಃ ಏರಿಕೆ-ಬೆಳವಣಿಗೆ ಕಂಡರೂ ಎಲ್ಲಾ ದೈನಂದಿನ ಉತ್ಪನ್ನಗಳು ಮತ್ತು ಸೇವೆಗಳ ಬೆಲೆ, ರೆಸ್ಟೋರೆಂಟ್ಗಳಲ್ಲಿ ಊಟ, ಸಿನೇಮಾ ಟಿಕೆಟ್, ಲಿಪ್ಸ್ಟಿಕ್ ಇತರ ವಸ್ತುಗಳ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿದೆ. ಇದು ಅವರ ಮಾಸಿಕ ಖರ್ಚನ್ನು ಹೆಚ್ಚಿಸಿದೆ.
ಜನವರಿ 2013ರಿಂದ ಈಚೆಗೆ ತಯಾರಿಸಲ್ಪಟ್ಟ ಆಹಾರ ದರಗಳಲ್ಲಿ ಏರಿಕೆ ಕಂಡಿದೆ. ಹೋಟೆಲ್ ಊಟ, ಚಹಾ ಬೆಲೆಗಳು ಶೇ.9ರಷ್ಟು ಏರಿಕೆ ಕಂಡಿದ್ದರೆ, ಡಿಯೋಡ್ರೆಂಟ್ಗಳು, ಲಿಪ್ಸ್ಟಿಕ್, ಜೀವನಶೈಲಿ ಉತ್ಪನ್ನಗಳ ಬೆಲೆಗಳು ಮಾಸಿಕ ಸರಾಸರಿ ಶೇ.5ರಷ್ಟು ಹೆಚ್ಚಳವಾಗಿವೆ. ಡಿಟಿಎಚ್ ದರ ಮಾಸಿಕ 180-250, ಸಿನೇಮಾ ಟಿಕೆಟ್ಗಳ ಬೆಲೆ ಶೇ.5.27, ಕ್ಷೌರ ಬೆಲೆ 300ರಿಂದ 360, ಶಿಕ್ಷಣ ಹಾಗೂ ಟ್ಯೂಶನ್ ಶುಲ್ಕ ಶೇ.7.29, ರೈಲು ದರ ಶೇ.30ರಷ್ಟು ಏರಿಕೆ ಕಂಡಿವೆ ಎಂದು ಹೇಳಲಾಗಿದೆ. ಮನೆಗಳ ಬಾಡಿಗೆ ದರಗಳು ಶೇ.25 ಹೆಚ್ಚಳ ಕಂಡಿದೆ.
ಸಾರ್ವಜನಿಕ ಸೇವೆಗಳಾದ ಪ್ರಾಥಮಿಕ ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣ ಬಹು ಅಗತ್ಯವೆನಿಸಿದ್ದು, ಅವುಗಳ ಗುಣಮಟ್ಟ ಕ್ಷೀಣಿಸಿವೆ. ಇದರಿಂದಾಗಿ ಜನರು ಖಾಸಗಿ ಸೇವೆಗಳನ್ನು ಬಳಸುವಲ್ಲಿ ಅನಿವಾರ್ಯತೆ ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.