ಚೆನ್ನೈ: ದೇಶದಲ್ಲೇ ಅತ್ಯಧಿಕ ಮಟ್ಟದಲ್ಲಿ ಹಸಿದ ಜನರು ಕೋಲ್ಕತಾದಲ್ಲಿಯೇ ಇದ್ದಾರಾ? ಎಂಬುದು ಈಗ ಚರ್ಚಿತವಾಗುತ್ತಿರುವ ವಿಷಯ. ಇದಕ್ಕೆ ಕಾರಣವೆಂದರೆ ಪಶ್ಚಿಮ ಬಂಗಾಳದ ರಾಜಧಾನಿಯ ಭದ್ರಲೋಕ ಎಂಬಲ್ಲಿ ರೂ.690 ಸರಾಸರಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಆನ್ಲೈನ್ ಮೂಲಕ ಆಹಾರ ಆರ್ಡರ್ ಮಾಡಲಾಗುತ್ತಿದೆ ಎಂದು ಆಹಾರ ಪೋರ್ಟಲ್ ಝೊಮೆಟೋ (Zomato) ವರದಿ ಮಾಡಿರುವುದು.
ಸುಮಾರು ರೂ.640 ಸರಾಸರಿಯಲ್ಲಿ ಆನ್ಲೈನ್ ಆಹಾರ ಆರ್ಡರ್ ಮಾಡುತ್ತಿರುವ ದೆಹಲಿ ಹಾಗೂ ರೂ.625 ಸರಾಸರಿಯಲ್ಲಿ ಆಹಾರ ಆರ್ಡರ್ ಮಾಡುತ್ತಿರುವ ಹೈದರಾಬಾದ್ ನಗರಗಳು ಎರಡನೇ ಸ್ಥಾನದಲ್ಲಿವೆ. ಬೆಂಗಳೂರು (ರೂ.540), ಚೆನ್ನೈ (ರೂ.500), ಮುಂಬೈ (ರೂ.490) ಹಾಗೂ ಪುಣೆ (ರೂ.450) ನಂತರದ ಸ್ಥಾನಗಳಲ್ಲಿವೆ.
ಗ್ರಾಹಕನೋರ್ವ ದಿನವೊಂದರಲ್ಲೇ ರೂ.21,500 ವರೆಗಿನ ಮೊತ್ತದ ಆಹಾರ ಆರ್ಡರ್ ಮಾಡಿರುವುದು ಅತಿ ಹೆಚ್ಚಿನ ಮೌಲ್ಯವಾಗಿದೆ. ಚಿಕನ್ ಬಿರಿಯಾನಿ, ಬಟರ್ ಚಿಕನ್, ಬರ್ಗರ್, ಪಿಜ್ಜಾ ಹಾಗೂ ಹಕ್ಕಾ ನೂಡಲ್ಸ್ ಗ್ರಾಹಕರ ಹೆಚ್ಚಿನ ಆದ್ಯತೆಯ ಆರ್ಡರ್ಗಳಾಗಿವೆ. ಚೈನೀಸ್, ಇಟಾಲಿಯನ್, ಸೌತ್ ಇಂಡಿಯನ್ ಮತ್ತು ’ಪೌಷ್ಟಿಕ ಆಹಾರಗಳು’ ಕೂಡ ಜನಪ್ರಿಯವಾಗಿವೆ.
ಮಾಹಿತಿಗಳ ಪ್ರಕಾರ ಶೇ.86ರಷ್ಟು ಮಂದಿ ಗ್ರಾಹಕರು ತಮ್ಮ ಸೆಲ್ಫೋನ್ಗಳು, ಶೇ. 53ರಷ್ಟು ಜನರು ಆಂಡ್ರಾಯ್ಡ್ ಸಾಧನಗಳ ಮೂಲಕ, ಶೇ.29ರಷ್ಟು ಐಒಎಸ್ ಹ್ಯಾಂಡ್ಸೆಟ್ಗಳು ಮತ್ತು ಶೇ.4ರಷ್ಟು ಮಂದಿ ಮೊಬೈಲ್ ಅಂತರ್ಜಾಲಗಳ ಸಹಾಯದಿಂದ ಆನ್ಲೈನ್ ಆರ್ಡರ್ ಮಾಡುತ್ತಿದ್ದಾರೆ. ಶೇ.14ರಷ್ಟು ಮಂದಿ ಮಾತ್ರ ಕಂಪ್ಯೂಟರ್ ಡೆಸ್ಕ್ಟಾಪ್ ಸಹಾಯದಿಂದ ಆರ್ಡರ್ ಮಾಡುತ್ತಿದ್ದಾರೆ. ಇನ್ನು ಆನ್ಲೈನ್ ಪಾವತಿ ಸೈಟ್ಗಳಾದ Paytm ಹಾಗೂ Citrus Pay ಆನ್ಲೈನ್ ಆರ್ಡರ್ಗಳಿಗೆ ರಿಯಾಯಿತಿ ನೀಡುತ್ತಿವೆ.
ಆದಾಗ್ಯೂ ಕಾರ್ಡ್ ಮೂಲಕ ಪಾವತಿ ಮಾಡುವ ಗ್ರಾಹಕರ ಸಂಖ್ಯೆ ಕಳೆದ ಸೆಪ್ಟೆಂಬರ್ನಿಂದ ಡಿಸೆಂಬರ್ ನಡುವೆ ಶೇ.12ರಿಂದ 16ಕ್ಕೇರಿದೆ.
ಈ ನಡುವೆ ಶೇ.10-15 ರಿಯಾಯಿತಿ ಪಡೆದ ಗ್ರಾಹಕರ ಸಂಖ್ಯೆ ಶೇ.43ರಷ್ಟು ಇದ್ದರೆ ಶೇ.20-25 ರಿಯಾಯಿತಿ ಪಡೆದ ಗ್ರಾಹಕರು ಶೇ. 38. 14 ಪ್ರತಿಶತ ಜನರು ಮಾತ್ರ ಶೇ.30ಕ್ಕೂ ಅಧಿಕ ಪ್ರಮಾಣದಲ್ಲಿ ರಿಯಾಯಿತಿ ಪಡೆದಿದ್ದಾರೆ.
ಆನ್ಲೈನ್ ಚಿಲ್ಲರೆ ವ್ಯಾಪಾರ ಕಂಪೆನಿ Ninjcart ತನ್ನ ಎಲ್ಲಾ ರಿಯಾಯಿತಿಗಳನ್ನು ನಿಲ್ಲಿಸಿದೆ ಎಂದು ಕಂಪೆನಿಯ ಸಹ ಸಂಸ್ಥಾಪಕ ತಿರುಕುಮಾರನ್ ನಿರಂಜನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.