ನವದೆಹಲಿ: ಮಿತಿ ಮೀರುತ್ತಿರುವ ವಾಯುಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ದೆಹಲಿ ಸರ್ಕಾರ ಜಾರಿಗೆ ತಂದಿರುವ ಸಮ-ಬೆಸ ನಿಯಮ ಶುಕ್ರವಾರದಿಂದ ಅನುಷ್ಠಾನಕ್ಕೆ ಬಂದಿದ್ದು, ಇಂದು ಬೆಸ ಸಂಖ್ಯೆಯ ಕಾರುಗಳು ಮಾತ್ರ ರಸ್ತೆಗಳಿಯಬೇಕಾಗಿದೆ.
15 ದಿನಗಳ ಪರೀಕ್ಷಾರ್ಥವಾಗಿ ಈ ನಿಯಮವನ್ನು ಇಂದು ಜಾರಿಗೊಳಿಸಲಾಗಿದೆ, ಬೆಸ ಸಂಖ್ಯೆಯ ನಂಬರ್ ಪ್ಲೇಟ್ ಹೊಂದಿರುವ ಕಾರುಗಳಿಗೆ ಮಾತ್ರ ರಸ್ತೆಗಿಳಿಯುವ ಅವಕಾಶ ಇದೆ. ಒಂದು ವೇಳೆ ಸಮ ಸಂಖ್ಯೆ ಕಾರುಗಳು ರಸ್ತೆಗಿಳಿದರೆ ಅದರ ಚಾಲಕರಿಗೆ 2,000 ರೂಪಾಯಿ ದಂಡ ವಿಧಿಸಲಾಗುತ್ತದೆ.
ದೆಹಲಿಯ ಮಾಲಿನ್ಯವನ್ನು ತಡೆಗಟ್ಟಲು ಈ ನಿಯಮ ಜಾರಿಗೊಳಿಸಲಾಗಿದೆ, 15 ದಿನಗಳ ಪರೀಕ್ಷಾರ್ಥ ಪ್ರಯೋಗ ಇದಾಗಿದ್ದು, ಇದು ಯಶಸ್ವಿಯಾದರೆ ಮಾತ್ರ ಸರ್ಕಾರ ಇದನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.