ಹೈದರಾಬಾದ್: ಅಂಧ್ರ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜಧಾನಿ ಅಮರಾವತಿಯಲ್ಲಿ ಜಲಾಂತರ್ಗಾಮಿ ಸುರಂಗವೂ ರಚನೆಯಾಗಲಿದೆ. ಇದು ದೇಶ ಮೊತ್ತ ಮೊದಲ ಅಂಡರ್ ವಾಟರ್ ಟನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಸಿಂಗಾಪುರದ ವಿನ್ಯಾಸಕಾರರು ರಾಜಧಾನಿ ಅಮರಾವತಿಯ ಮಾಸ್ಟರ್ ಪ್ಲ್ಯಾನ್ಗಳನ್ನು ರೂಪಿಸಿದ್ದಾರೆ, ಅವರ ಯೋಜನೆಯಂತೆ ಕೃಷ್ಣಾ ನದಿಯ ತಳದಲ್ಲಿ ಜಲಾಂತರ್ಗಾಮಿ ಸುರಂಗ ರಚನೆಯಾಗಲಿದೆ.
ಸರ್ಕಾರದ ಅನುಮೋದನೆ ಸಿಕ್ಕ ಕೂಡಲೇ 3 ಕಿ.ಮೀ ಉದ್ದದ ಸುರಂಗ ವಾಹನಗಳಿಗೆ ಓಡಾಡಲು ಅನುಕೂಲವಾಗುವಂತೆ ರಚನೆಯಾಗಲಿದೆ. ಪ್ರವಾಸಿಗರನ್ನು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ. ಇದು ರಚನೆಯಾದರೆ ರಾಜ್ಯದ ಪ್ರವಾಸೋದ್ಯಮದ ಆದಾಯವೂ ಹೆಚ್ಚಾಗಳಿದೆ ಎನ್ನಲಾಗಿದೆ.
ಈ ಸುರಂಗ ನಿರ್ಮಾಣಕ್ಕೆ ಸಾಕಷ್ಟು ಹಣ ವ್ಯಯವಾಗುತ್ತದೆ, ಆದರೂ ನಾವಿದನ್ನು ಮುಂದುವರೆಸುತ್ತೇವೆ, ಇದರಿಂದ ರಾಜ್ಯದ ಪ್ರವಾಸೋದ್ಯಮ ಬೆಳೆಯಲಿದೆ ಎಂದು ಆಂಧ್ರದ ರಾಜಧಾನಿ ಪ್ರದೇಶ ಅಭಿವೃದ್ಧಿ ಮಂಡಳಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.