ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಎಎಪಿ ತಕ್ಷಣವೇ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ದೆಹಲಿ ಸರ್ಕಾರ ನಿಯೋಜಿಸಿರುವ ಸಮಿತಿ ತನ್ನ ವರದಿಯಲ್ಲಿ ಜೇಟ್ಲಿಯವರ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ, ಆದರೂ ಎಎಪಿ ಅವರ ವಿರುದ್ಧ ಆಕ್ರಮಗಳ ಆರೋಪ ಮಾಡಿದೆ. ಹೀಗಾಗಿ ತಕ್ಷಣ ಎಎಪಿ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ವಕ್ತಾರ ಎಂ.ಜೆ.ಅಕ್ಬರ್ ಆಗ್ರಹಿಸಿದ್ದಾರೆ.
‘ಜೇಟ್ಲಿ ಯಾವುದೇ ತಪ್ಪ ಮಾಡಿಲ್ಲ, ಆದರೆ ಅವರ ಮೇಲೆ ಆರೋಪ ಹೊರಿಸಿ ಕೇಜ್ರಿವಾಲ್ ತಪ್ಪು ಮಾಡಿದ್ದಾರೆ. ಶೋ ಹೊಡೆದುಕೊಂಡು ಒಬ್ಬರು ಸರ್ಕಾರವನ್ನು ನಡೆಸಲು ಸಾಧ್ಯವಿಲ್ಲ’ ಎಂದಿದ್ದಾರೆ.
ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಅವರೂ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗಾಳಿ ನಡೆಸಿದ್ದು, ಎಎಪಿಗೆ ಸುಳ್ಳು ಹೇಳುವ ದುರಾಭ್ಯಾಸವಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.