ನವದೆಹಲಿ: ಲಾಹೋರ್ನಲ್ಲಿ ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅನಿರೀಕ್ಷಿತ ಭೇಟಿಯ ಬಳಿಕ ಇದೀಗ ಜನವರಿ 15 ರಂದು ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆ ನಡೆಯಲಿದೆ.
ಜ.15ರಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಇಸ್ಲಾಮಾಬಾದ್ಗೆ ತೆರಳಿ, ಅಲ್ಲಿನ ವಿದೇಶಾಂಶ ಕಾರ್ಯದರ್ಶಿ ಅಜೀಝ್ ಅಹ್ಮದ್ ಚೌಧರಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೋದಿಯ ಆಶ್ಚರ್ಯಕರ ಲಾಹೋರ್ ಭೇಟಿಯ ಬಳಿಕ ಈ ಬೆಳವಣಿಗೆ ನಡೆದಿದೆ.
ಶುಕ್ರವಾರ ಅಫ್ಘಾನಿಸ್ಥಾನದಿಂದ ವಾಪಾಸ್ ಬರುತ್ತಿದ್ದ ವೇಳೆ ಲಾಹೋರ್ನಲ್ಲಿ ಇಳಿದು ನವಾಝ್ ಶರೀಫ್ ಅವರನ್ನು ಭೇಟಿಯಾದ ಮೋದಿ ಇಡೀ ಜಗತ್ತನ್ನೇ ನಿಬ್ಬರಗಾಗುವಂತೆ ಮಾಡಿದ್ದರು. ಸುಮಾರು 90 ನಿಮಿಷಗಳ ಕಾಲ ಉಭಯ ನಾಯಕರ ನಡುವೆ ಮಾತುಕತೆ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.