ಹೈದರಾಬಾದ್: ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾಗೆ ತೆರಳಿದ್ದ ಕೆಲವು ವಿದ್ಯಾರ್ಥಿಗಳನ್ನು ಅಬು-ಧಾಬಿ ವಿಮಾನ ನಿಲ್ದಾಣಳದಲ್ಲಿ ಅಮೇರಿಕಾದ ಕಸ್ಟಮ್ಸ್ ಮತ್ತು ಗಡಿ ಭಧ್ರತಾ ಅಧಿಕಾರಿಗಳು ಸಾರ್ವಜನಿಕವಾಗಿ ಅವಮಾನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಗಳಿಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದ ಅಧಿಕಾರಿಗಳು ಅಪರಾಧಿಗಳಂತೆ 16 ಗಂಟೆಗಳ ಕಾಲ ಬಂಧಿಸಿ ಬಳಿಕ ಡಿ.೨೨ರಂದು ಬಿಡುಗಡೆ ಮಾಡಲಾಯಿತು ಎಂದು ತಿಳಿದು ಬಂದಿದೆ.
ಈ ವಿದ್ಯಾರ್ಥಿಗಳು ಕ್ಯಾಲಿಫೋರ್ನಿಯಾ ಸಂಸ್ಥೆಯ ಸ್ಯಾನ್ ಜೋಸ್ನ ಸಿಲಿಕಾನ್ ವ್ಯಾಲಿ ವಿಶ್ವವಿದ್ಯಾಲಯ ಮತ್ತು ಫ್ರೆಮಾಂಟ್ನ ನಾರ್ಥ್ ವೆಸ್ಟರ್ನ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪತ್ರ ಹಾಗೂ ಅಮೇರಿಕಾದಿಂದ ಮಾನ್ಯತೆ ಪಡೆದ ವೀಸಾ ಹೊಂದಿದ್ದರು.
ವಿದ್ಯಾರ್ಥಿಗಳ ವೀಸಾ ರದ್ದುಗೊಳಿಸಲಾಗಿದ್ದು, ಅಧಿಕಾರಿಗಳು ಯಾವುದೇ ವಿವರ ನೀಡಿಲ್ಲ. ವಿದ್ಯಾರ್ಥಿಗಳು ಅಮೇರಿಕಾದ ವಿಶ್ವವಿದ್ಯಾಲಯದಿಂದ ತಮ್ಮ ಸ್ವಯಂಪ್ರೇರಣೆಯಿಂದ ಪ್ರವೇಶಾತಿಯನ್ನು ರದ್ದುಗೊಳಿಸಿದ್ದಾರೆ ಎಂಬ ದಾಖಲೆ ಪತ್ರದಲ್ಲಿ ಬಲವಂತವಾಗಿ ಸಹಿ ಹಾಕಿಸಲಾಗಿದೆ ಎನ್ನಲಾಗಿದೆ. ಸುಮಾರು 16 ವಿದ್ಯಾರ್ಥಿಗಳು ಅಮೇರಿಕಾಗೆ ತೆರಳಿದ್ದು, ಇವರ ವೀಸಾ ರದ್ದುಗೊಳಿಸಿ,ಹೈದರಾಬಾದ್ ವಿಮಾನದಲ್ಲಿ ಭಾರತಕ್ಕೆ ವಾಪಾಸ್ ಕಳುಹಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.