ಭುವನೇಶ್ವರ: ವಿಪ್ರೋ ಸಮೂಹದ ಅಜಿಂ ಪ್ರೇಮ್ಜೀ ಪರೋಪಕಾರಿ ಉಪಕ್ರಮ (ಎಪಿಪಿಐ) ಒಡಿಶಾ ರಾಜ್ಯದಲ್ಲಿ ಅಪೌಷ್ಟಿಕತೆ ಸಮಸ್ಯೆ ತಗ್ಗಿಸಲು ಮುಂದಿನ 10 ವರ್ಷಗಳಲ್ಲಿ 300 ಕೋಟಿ ರೂಪಾಯಿ ವ್ಯಯಿಸಲಿದೆ. ಈ ನಿಟ್ಟಿನಲ್ಲಿ ಎಪಿಪಿಐ ಒಡಿಶಾ ಸರ್ಕಾರದೊಂದಿಗೆ ದಾಖಲೆ ಪತ್ರಗಳಿಗೆ ಸಹಿ ಹಾಕಿದೆ.
ವಿಪ್ರೋ ಸಂಸ್ಥಾಪಕ ಅಜಿಂ ಪ್ರೇಮ್ಜೀ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಅಪೌಷ್ಟಿಕತೆ ಸಮಸ್ಯೆಯನ್ನು ತಡೆಗಟ್ಟುವ ಬದ್ಧ ಯೋಜನೆಯ ಯಶಸ್ಸಿಗೆ ರಾಜ್ಯ ಸರ್ಕಾರ ದೀರ್ಘ ಕಾಲ ಶ್ರಮಿಸಬೇಕಿದೆ ಎಂದು ಅಜಿಂ ಪ್ರೇಮ್ಜೀ ಹೇಳಿದ್ದಾರೆ.
ಎಪಿಪಿಐ ಮೂಲಕ ರಾಜ್ಯದ ಪರಿಣತಿ ಮತ್ತು ವಿಪ್ರೋದ ತಾಂತ್ರಿಕ ಅನ್ವೇಷಣೆಗಳ ಸ್ಪರ್ಧಾತ್ಮಕ ಪಾಲುದಾರಿಕೆ ಮತ್ತು ಪೌಷ್ಟಿಕತೆ ಕುರಿತ ಕಾರ್ಯಕ್ರಮಗಳು ಭಿನ್ನವಾಗಿವೆ. ವಿಪ್ರೋದ ಎಪಿಪಿಐ ಪೌಷ್ಟಿಕತೆ ಕ್ಷೇತ್ರ ಮಾತ್ರವಲ್ಲದೆ ಶಿಕ್ಷಣ ಹಾಗೂ ಆಡಳಿತ ಕ್ಷೇತ್ರದಲ್ಲೂ ತನ್ನ ಬೆಂಬಲವನ್ನು ನೀಡಬೇಕು ಎಂದು ಅಜೀಂ ಪ್ರೇಮ್ಜೀ ಅವರಲ್ಲಿ ಪಟ್ನಾಯಕ್ ಕೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಐಟಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಪ್ರಸ್ತಾಪಿಸಲಾಗಿದ್ದು, ಜಾಗತಿಕ ತರಬೇತಿ ಕೇಂದ್ರ ಸ್ಥಾಪಿಸಲು ಯೋಜನೆ ಹೊಂದಿರುವುದಾಗಿ ಅವರು ಹೇಳಿದ್ದಾರೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಇನ್ಸ್ಟಿಟ್ಯೂಟ್, ಐಟಿ ಕ್ಯಾಂಪಸ್ ಹಾಗೂ ಅಜಿಂ ಪ್ರೇಮ್ಜೀ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಲು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.