ಬಂಟ್ವಾಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಇದೇ 11ರಿಂದ ಮೊದಲ್ಗೊಂಡು 30ರ ತನಕ ರಾಜ್ಯದಾದ್ಯಂತ ’ಜಾತಿಗಣತಿ’ ಸಮೀಕ್ಷೆ ನಡೆಯಲಿದೆ.
ಈ ಸಂದರ್ಭದಲ್ಲಿ ಜಿಲ್ಲೆಯ ಸಮಸ್ತ ಗಾಣಿಗರು ತಮ್ಮ ಜಾತಿಯನ್ನು ’ಗಾಣಿಗ’ ಮತ್ತು ಉಪಜಾತಿಯನ್ನು ’ಸಪಳಿಗ’ ಎಂದು ನಮೂದಿಸಲು ಗಣತಿದಾರರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಇದೇ ವೇಳೆ ಮಾತೃಭಾಷೆಯನ್ನು ತುಳು ಎಂದು ನಮೂದಿಸುವಂತೆ ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಕ್ಷೌರಿಕ ಕುಲ ಕಸುಬುದಾರರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂದರ್ಭ ಗಣತಿದಾರರ ನಿಗದಿತ ನಮೂನೆಯ ಜಾತಿ ಕಾಲಂನಲ್ಲಿ ಸವಿತಾ ಹಾಗೂ ಉಪಜಾತಿ ಕಾಲಂನಲ್ಲಿ ಭಂಡಾರಿ, ಪರಿಯಾಳ, ಹಡಪದ, ನಯನಜಕ್ಷತ್ರಿಯ, ಭಜಂತ್ರಿ, ಕ್ಷೌರಿಕ ಹಾಗೂ ಸಾಂಪ್ರದಾಯಿಕ ವೃತ್ತಿ ಅಥವಾ ಕುಲಕಸುಬಿನ ವಿವರದ ಕಾಲಂನಲ್ಲಿ ಕ್ಷೌರಿಕ ಎಂದು ನಮೂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದಿನೇಶ್ ಎಲ್.ಬಂಗೇರ ಅವರು ತಿಳಿಸಿದ್ದಾರೆ.
ಸವಿತಾ ಸಮಾಜ 25 ಪರ್ಯಾಯ ಜಾತಿಗಳ ಹೆಸರಿನಲ್ಲಿ ಗುರುತಿಸಿಕೊಂಡಿದೆ. ಈ ಸಮಾಜದ ಕ್ಷೇಮಾಭಿವೃದ್ಧಿ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಸರಕಾರಿ ಮೀಸಲಾತಿಗೆ ಅರ್ಹತೆಯನ್ನು ಹೊಂದುವ ಹಿನ್ನೆಲೆಯಲ್ಲಿ ಸಮೀಕ್ಷೆ ಸಂದರ್ಭ ಈ ಸರಿಯಾದ ಮಾಹಿತಿಯನ್ನು ನೀಡಬೇಕಾಗಿ ವಿನಂತಿಸಲಾಗಿದೆ ಎಂದವರು ತಿಳಿಸಿದ್ದಾರೆ. ಮನೆನಂಬ್ರ, ಮತದಾರರ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಕಾರ್ಡ್, ಜಾತಿ-ಉಪಜಾತಿ ಮಾಹಿತಿ, ಜಮೀನು ವಿವರ, ಕುಟುಂಬದ ಯಜಮಾನನ ಮೊಬೈಲ್ ನಂಬ್ರ ಹಾಗೂ ಕುಟುಂಬದ ಸದಸ್ಯರ ಶೈಕ್ಷಣಿಕ ಅರ್ಹತೆ ಮಾಹಿತಿಯನ್ನು ಮನೆ ಭೇಟಿ ಮಾಡುವ ಗಣತಿದಾರರಿಗೆ ಕೊಡಬೇಕೆಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.