×
Home About Us Advertise With s Contact Us

ಸಿಂಗಾಪುರದ ಸಂಸ್ಥಾಪಕ ಲೀ ನಿಧನ: ಮೋದಿ ಸಂತಾಪ

leeಸಿಂಗಾಪುರ: ಸಿಂಗಾಪುರದ ಸಂಸ್ಥಾಪಕ ಪಿತಾಮಹ ಮತ್ತು ಅದರ ಮೊದಲ ಪ್ರಧಾನಿ, ಚಿಕ್ಕ ದ್ವೀಪವಾಗಿದ್ದ ಸಿಂಗಾಪುರವನ್ನು ಶ್ರೀಮಂತ ದೇಶವನ್ನಾಗಿ ಪರಿವರ್ತಿಸಿದ್ದ ಲೀ ಕ್ವಾನ್ ಯೀವ್ ಸೋಮವಾರ ಮುಂಜಾನೆ ವಿಧಿವಶರಾಗಿದ್ದಾರೆ.

ಕಳೆದ 6 ವಾರಗಳಿಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 3.31ರ ಸುಮಾರಿಗೆ ಸಿಂಗಾಪುರದ ಜನರಲ್ ಆಸ್ಪತ್ರೆಯಲ್ಲಿ ದೈವಾಧೀನರಾದರು.

91 ವರ್ಷದ ತನ್ನ ದೇಶದ ಶಿಲ್ಪಿಯನ್ನು ಕಳೆದುಕೊಂಡಿರುವ ಸಿಂಗಾಪುರದ ಜನತೆ ಕಂಬನಿ ಮಿಡಿಯುತ್ತಿದ್ದಾರೆ.

ಬ್ರಿಟಿಷರಿಂದ ತನ್ನ ದೇಶ ಬಂಧಮುಕ್ತವಾದ ಬಳಿಕ 1959ರಿಂದ 1990ರವರೆಗೆ ಲೀ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಇವರ ಕಾಲದಲ್ಲಿ ಸಿಂಗಾಪುರ ಅತ್ಯಂತ ಶ್ರೀಮಂತ ರಾಷ್ಟ್ರವಾಗುವತ್ತ ದಾಪುಗಲಿಟ್ಟಿತು.

ಲೀ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪವ್ಯಕ್ತಪಡಿಸಿದ್ದಾರೆ. ’ಅವರೊಬ್ಬ ದೂರದೃಷ್ಟಿಯುಳ್ಳ ಮುತ್ಸದ್ಧಿ ಮತ್ತು ನಾಯಕರುಗಳಲ್ಲಿ ಸಿಂಹವಾಗಿದ್ದರು’ ಎಂದು ಟ್ವಿಟ್ ಮಾಡಿದ್ದಾರೆ.

ವಿಶ್ವನಾಯಕರುಗಳೂ ಲೀ ಅಗಲುವಿಕೆಗೆ ಸಂತಾಪ ಸೂಚಿಸಿದ್ದಾರೆ.

 

Recent News

Back To Top
error: Content is protected !!