ನವದೆಹಲಿ: ‘ಭಕ್ತಿ ವಿತೌಟ್ ಬಾರ್ಡರ್ಸ್’ ಎಂಬ ಕೃಷ್ಣ ಭಜನೆಯ ಆಲ್ಬಂ 58ನೇ ಗ್ರ್ಯಾಮಿ ಅವಾರ್ಡ್ಗೆ ನಾಮನಿರ್ದೇಶಿತಗೊಂಡಿದೆ. ಪ್ರಶಸ್ತಿ ಪ್ರಧಾನ ಸಮಾರಂಭ ಫೆಬ್ರವರಿ 15ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ.
‘ಆಸ್ಟ್ರೇಲಿಯಾ, ಅಮೆರಿಕಾ, ಇಂಗ್ಲೆಂಡ್, ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿನ ಕೃಷ್ಣ ಭಕ್ತರು ಸೇರಿ ಈ ಅಲ್ಬಂ ರಚಿಸಿದ್ದಾರೆ. ಒಟ್ಟು 12 ಹಾಡುಗಾರರು ಇದರಲ್ಲಿ ಹಾಡಿದ್ದಾರೆ. ಇದಕ್ಕಾಗಿ ನಾವು ಈ ಅಲ್ಬಂಗೆ ‘ಭಕ್ತಿ ವಿತೌಟ್ ಬಾರ್ಡರ್’ ಎಂದು ಹೆಸರಿಟ್ಟಿದ್ದೇವೆ ಎಂದು ಅಮೆರಿಕಾದಲ್ಲಿನ ಇಸ್ಕಾನ್ ಫಾಲೋವರ್ ಸುದೇವಿ ದಾಸ್ ತಿಳಿಸಿದ್ದಾರೆ.
ರಾಧೆ ಜೈ ಜೈ ಮಾಧವ ದಾಯಿತೆ, ನಮೋ ಮಹಾ ವದನ್ಯಯ, ಭಜ ಗೋವಿಂದಂ, ಜಗ್ನನಾಥಷ್ಟಾಕಂ ಮುಂತಾದ ಭಜನೆಗಳು ಈ ಆಲ್ಬಂನಲ್ಲಿವೆ. ಇದರ ಸಾಲುಗಳು ಸಂಸ್ಕೃತ ಮತ್ತು ಹಿಂದಿಯಲ್ಲಿವೆ, ಮಂತ್ರಗಳಿಗೆ ಮಾರ್ಡನ್ ಪಾಪ್ ಟಚ್ ನೀಡಲಾಗಿದೆ.
ಇವೆಲ್ಲವೂ ಸಾಂಪ್ರದಾಯಿಕ ಭಜನೆಗಳಾಗಿದ್ದು, ಈ ಭಜನೆಗಳನ್ನು ಹಾಡುವ ಪ್ರತಿದಿನವೂ ನಾವು ದೇಗುಲಕ್ಕೆ ಭೇಟಿಕೊಟ್ಟು ಪ್ರೇರಣೆ ಪಡೆದುಕೊಳ್ಳುತ್ತಿದ್ದೆವು ಎನ್ನುತ್ತಾರೆ ಸುದೇವಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.