ಚಂಡೀಗಢ: ಇದುವರೆಗೆ ಜಮ್ಮು ಕಾಶ್ಮೀರದಲ್ಲಿ ಗಡಿ ಉಲ್ಲಂಘನೆ ಮಾಡಿ ಉಪಟಳ ನೀಡುತ್ತಿದ್ದ ಪಾಕಿಸ್ಥಾನ ಪಡೆಗಳು ಇದೀಗ ಪಂಜಾಬ್ ಗಡಿ ಪ್ರದೇಶದಲ್ಲೂ ಕುಚೋದ್ಯವನ್ನು ಆರಂಭಿಸಿವೆ.
ಶುಕ್ರವಾರ ತಡರಾತ್ರಿ ಅಮೃತಸರದ ಅಟ್ಟಾರಿಯಲ್ಲಿನ ಬಿಎಸ್ಎಫ್ ಪೋಸ್ಟ್ ಮೇಲೆ ಪಾಕಿಸ್ಥಾನ ಪಡೆಗಳು ಗುಂಡಿನ ದಾಳಿ ನಡೆಸಿವೆ. ಘಟನೆಯಲ್ಲಿ 3 ಯೋಧರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಗುರು ನಾನಕ್ ದೇವ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
26/11 ಮುಂಬಯಿ ದಾಳಿಯ ಮಾಸ್ಟರ್ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ಥಾನ ಬಿಡುಗಡೆಗೊಳಿಸಿದ ಮರುದಿನವೇ ಈ ಘಟನೆ ನಡೆದಿದೆ.
ಪಾಕ್ ದಾಳಿಗೆ ಭಾರತೀಯ ಯೋಧರೂ ತಕ್ಕ ಪ್ರತ್ಯುತ್ತರವನ್ನು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.