ಬೆಳ್ತಂಗಡಿ : ಜಗತ್ತಿನಲ್ಲಿ ಎಲ್ಲಾ ಮತ, ಪಂಥದವರಿಗೆ ಆಶ್ರಯ ನೀಡಿದ ದೇಶವೊಂದಿದ್ದರೆ ಅದು ಭಾರತ ಮಾತ್ರ. ವಿಶ್ವದಲ್ಲೆಡೆ ಭಾರತೀಯರು ಶಾಸ್ತ್ರ ಹಿಡಿದು ಹೋಗಿದ್ದಾರೆಯೇ ಹೊರತು ಶಾಸ್ತ್ರವನ್ನಲ್ಲ. ಹೀಗಾಗಿ ಅಸಹಿಷ್ಣುತೆಯ ಬಗ್ಗೆ ಮಾತನಾಡುವವರು ಮೂರ್ಖರು ಎಂದು ಶ್ರೀರಾಮ ಸೇನೆ ಕರ್ನಾಟಕ ಇದರ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು.
ಅವರು ಭಾನುವಾರ ಸಂಜೆ ಗೇರುಕಟ್ಟೆ ಸನಿಹದ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಹಿಂದೂ ಜಾಗೃತಿ ಸಮಿತಿ ಕಳಿಯ-ನ್ಯಾಯತರ್ಪು ವತಿಯಿಂದ ಏರ್ಪಡಿಸಲಾಗಿದ್ದ ಧರ್ಮಜಾಗೃತಿ ಸಮಾವೇಶದಲ್ಲಿ ಮುಖ್ಯಅತಿಥಿಸ್ಥಾನದಿಂದ ಮಾತನಾಡಿದರು.
ಹಿಂದುತ್ವ ವಿಚಾರದಲ್ಲಿ ಹೊಂದಾಣಿಕೆಯ ಮಾತೇಇಲ್ಲ. ಸರ್ವೇಜನಾ ಸುಖಿನೋ ಭವಂತುಃ ಇದುವೇ ಹಿಂದುತ್ವ ಮತ್ತು ಹಿಂದೂ ರಾಷ್ಟ್ರದ ಕಲ್ಪನೆ. ಭಾರತ ಮುಸ್ಲಿಂ, ಕ್ರಿಶ್ಚಿಯನ್ ಜನಾಂಗಕ್ಕೆ ಬದುಕಲು ಮತ್ತು ತಮ್ಮ ಆರಾಧನಾ ಪದ್ದತಿಯನ್ನು ಅನುಸರಿಸಲು ನೂರಾರು ವರ್ಷಗಳ ಹಿಂದೆಯೇ ಅವಕಾಶ ಕೊಟ್ಟಿದೆ. ಭಾರತದಲ್ಲಿದ್ದ ಯಾವುದೇ ರಾಜರು ಹೊರದೇಶದ ಮೇಲೆ ದಾಳಿ ಮಾಡಿರುವ ಒಂದೇ ಒಂದು ಉದಾಹರಣೆ ಇಲ್ಲ ಎಂದು ನೆನಪಿಸಿದ ಅವರು ಅಸಹಿಷ್ಣುತೆಯ ಬಗ್ಗೆ ಮಾತನಾಡುವವರದ್ದು ಬೂಟಾಟಿಕೆ, ನಾಟಕವೇ ಹೊರತು ಇನ್ನೇನಲ್ಲಾ. ಪ್ರಶಸ್ತಿಪಡೆದವರು ಪ್ರಶಸ್ತಿ ಪತ್ರವನ್ನು ವಾಪಸು ನೀಡಿದ್ದಾರೆಯೇ ಹೊರತು ಪಡೆದ ಹಣವನ್ನಾಗಲಿ, ನಿವೇಶನವನ್ನಾಗಲಿ ಹಿಂದಿರುಗಿಸಿಲ್ಲ. ಅಸಹಿಷ್ಣುತೆ ನಿಜವಾಗಿದ್ದರೆತಾವು ಪಡೆದ ಸೈಟನ್ನು ಹಿಂದಿರುಗಿಸಲಿ ಎಂದು ಮುತಾಲಿಕ್ ಸವಾಲೆಸೆದರು.
ಅಂಬೇಡ್ಕರ್, ಬುದ್ದ, ಕನಕ, ಬಸವಣ್ಣ, ಮಹಾವೀರರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆಅವರ ಅನುಯಾಯಿಗಳು ಬೀದಿಗಿಳಿಯುತ್ತಾರೆ.ಆದರೆ ಆ ಮಹಾತ್ಮರನ್ನೆಲ್ಲಾಜನ್ಮಕೊಟ್ಟ ಭಾರತದ ಅಸ್ಮಿತೆಗೆ ಧಕ್ಕೆ ಬಂದಾಗ ಸುಮ್ಮನಿರುತ್ತಾರೆ.ಇದು ಸರಿಯೇ ಎಂದು ಪ್ರಶ್ನಿಸಿದ ಅವರು ನಮ್ಮಲ್ಲಿ ಸಹಜವಾಗಿ ದೇವ, ಜಾತಿ, ಭಾಷಾ ಭಕ್ತಿಇದೆ. ಆದರೆ ದೇಶಭಕ್ತಿಯನ್ನು ಎಲ್ಲಿದೆ ಅಂತ ಹುಡುಕಬೇಕಾದ ಸನ್ನಿವೇಶ ಬಂದಿದೆ ಎಂದು ವಿಷಾದಿಸಿದರು.
ಹಿಂದೂ ಸಮಾಜದಲ್ಲಿನ ದೋಷಗಳನ್ನು ಪರಿಹಾರ ಮಾಡಿಕೊಂಡು ಮುಂದೆ ಹೋಗಬೇಕಾದದ್ದು ಸತ್ಯ.ನ್ಯಾಯಾಲಯಗಳೂ ಕೂಡ ಅಪರಾಧಿಗಳನ್ನು ರಕ್ಷಿಸುತ್ತಿವೆ. ಹೀಗಾಗಿ ವ್ಯವಸ್ಥೆಯ ಬದಲಾವಣೆಗೋಸ್ಕರ ನಾವು ಸಿದ್ಧರಾಗಬೇಕಾಗಿದೆ. ಹಿಂದೂಗಳಲ್ಲಿ ಕ್ಷಾತ್ರ ಭಾವ ಜಾಗೃತಗೊಳ್ಳಬೇಕು ಎಂದರು.
ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ ಪಕ್ಷಗಳು ರಾಜಕೀಯ ಲಾಭಕ್ಕೊಸ್ಕರ ಧರ್ಮವನ್ನು ಉಪಯೋಗಿಸಿಕೊಂಡು ಹಿಂದುತ್ವವನ್ನು ದುರ್ಬಲ ಮಾಡುತ್ತಿದ್ದಾರೆ. ಓಟಿಗೋಸ್ಕರ ಹಿಂದೂ ಸಮಾಜ ವಿನಾಶವಾಗುತ್ತಿದೆ. ಸೌಜನ್ಯಾಳ ಅತ್ಯಾಚಾರ ಕೊಲೆಯಾದಾಗ ಯಾವುದೇ ಹಿಂದೂ ಸಂಘಟನೆಗಳು ಚಕಾರವೆತ್ತದಿರುವುದು ಖೇದಕರ ಎಂದ ಅವರು ಮುಸ್ಲಿಂ, ಕ್ರೈಸ್ತರೂ ಹಿಂದೂಗಳೇ. ಅವರೆಲ್ಲರನ್ನೂ ಒಟ್ಟಿಗೆ ಮುನ್ನಡೆಸುವ ಕೆಲಸ ಹಿಂದೂ ಸಮಾಜದಿಂದಾಗಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅವರು ಹಿಂದೂ ಸಮಾಜದ ಸಂಘಟನೆಯನ್ನು ಮಾಡುವಾಗ ಸಣ್ಣಪುಟ್ಟ ಸಮಸ್ಯೆಗಳಾಗುವುದು ಸಹಜ. ಅವೆಲ್ಲವನ್ನೂ ನಿವಾರಿಸಿಕೊಂಡು ಮುಂದೆ ನಡೆಯೋಣ. ಭಾರತ ವಿಶ್ವಗುರುವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು ಅದರಲ್ಲಿ ನಾವೂ ಭಾಗಿಗಳಾಗೋಣ ಎಂದು ಆಶಿಸಿದರು.
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ ಪೂಜಾರಿ ವೇದಿಕೆಯಲ್ಲಿದ್ದರು. ವಿಧಾನ ಪರಿಷತ್ ಸದಸ್ಯ ಗಣೇಶ್ಕಾರ್ಣೀಕ್ ಭೇಟಿ ನೀಡಿದರು. ಹಿಂದೂ ಜಾಗೃತಿ ಸಮಿತಿ ಸಂಚಾಲಕ ರಾಘವ ಎಚ್.ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಶಿವಶಂಕರ್ ವಂದೇಮಾತರಂ ಹಾಡಿದರು. ಸಮಿತಿ ಕೋಶಾಧಿಕಾರಿ ರಾಜೇಶ್ ಪೆಂರ್ಬುಡ ವಂದಿಸಿದರು. ಉಪನ್ಯಾಸಕ ಕೇಶವ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭ ಬೆಳಿಗ್ಗೆಯಿಂದ ಹಿಂದೂ ಕ್ರೀಡೋತ್ಸವ ಹಮ್ಮಿಕೊಳ್ಳಲಾಗಿದ್ದು ಕಬಡ್ಡಿ, ತ್ರೋಬಾಲ್ ಪಂದ್ಯಾಟಗಳು ನಡೆದವು. ಕ್ರೀಡೋತ್ಸವವನ್ನು ಹಿಂದೂಜಾಗರಣ ವೇದಿಕೆ ಪ್ರಾಂತ್ಯ ಸಂಚಾಲಕ ಸತ್ಯಜಿತ್ ಸುರತ್ಕಲ್ ಉದ್ಘಾಟಿಸಿದರೆ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ಅಧ್ಯಕ್ಷತೆ ವಹಿಸಿದ್ದರು. ಧರ್ಮ ಜಾಗರಣ ಜಿಲ್ಲಾ ನಿಧಿ ಪ್ರಮುಖ್ ಹರೀಶ್ ಪೂಂಜ ಭೇಟಿ ನೀಡಿದರು.
ಪಾಕಿಸ್ತಾನದೊಂದಿಗೆ ಭಾರತ ಮತ್ತೆ ಮಾತುಕತೆ ನಡೆಯುತ್ತಿರುವುದನ್ನು ನಾನು ಖಂಡತುಂಡವಾಗಿ ವಿರೋಧಿಸುತ್ತೇನೆ. ದೇಶದ್ರೋಹಿ ಯಾಕುಬ್ ಮೆಮನ್ ದಫನ ಸಂದರ್ಭ ಪಾಕಿಸ್ತಾನ ಜಿಂದಾಬಾದ್, ಮೆಮನ್ ಅಮರ್ ರಹೇ ಎಂದು ಮುಂಬಯಿಯಲಿ ಘೋಷಣೆ ಕೂಗಿದವರನ್ನು ಸಹಿಸಲು ಸಾಧ್ಯವಿಲ್ಲ ನನ್ನನ್ನು ಎಷ್ಟು ಸಲ ಬೇಕಾದರೂ ಜೈಲಿಗೆ ಕಳುಹಿಸಿದರೂ ನನ್ನ ಹಿಂದುತ್ವವನ್ನು ಬಂಧಿಸಲು ಸಾಧ್ಯವಿಲ್ಲ -ಪ್ರಮೋದ್ ಮುತಾಲಿಕ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.