ಮಂಗಳೂರು : ಡಿಸೆಂಬರ್ 19, 20 ರಂದು ಡಾ| ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮದಲ್ಲಿ ನಡೆಯಲಿರುವ ಆಯುಷ್ ಹಬ್ಬದ ಪೂರ್ವಭಾವಿ ಕಾರ್ಯಕ್ರಮವಾದ ಡಿ.17ರ ಯೋಗ ಮ್ಯಾರಾಥಾನ್ ಹಾಗೂ ಸಾಮೂಹಿಕ ಯೋಗಾಭ್ಯಾಸದ ಸಿದ್ದತೆಗಾಗಿ, ಆಸಕ್ತ ಸಾರ್ವಜನಿಕರಿಗೆ ಆವಿಷ್ಕಾರ ಯೋಗ ಸಂಸ್ಥೆಯು ಐದು ದಿನಗಳ ಯೋಗ ತರಬೇತಿಯನ್ನು ನಗರದ ನಾಲ್ಕು ಕೇಂದ್ರಗಳಲ್ಲಿ ಡಿಸೆಂಬರ್ 13 ರಿಂದ 17 ರವರೆಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಆಯುಷ್ ಆಸ್ಪತ್ರೆ ಹ್ಯಾಟ್ ಹಿಲ್, ಲಾಲ್ಬಾಗ್ನಲ್ಲಿ ಬೆಳಗ್ಗೆ ಮತ್ತು ಸಂಜೆ 6-00 ರಿಂದ 7-00 ರವರೆಗೆ. ಆವಿಷ್ಕಾರ ಯೋಗ, ಬಿಜೈನಲ್ಲಿ ಬೆಳಿಗ್ಗೆ 5-30 ರಿಂದ ಸಂಜೆ 8-00 ರವರೆಗೆ ಹತ್ತು ಬ್ಯಾಚ್ ನಲ್ಲಿ ತರಬೇತಿ ನೀಡಲಾಗುವುದು. ಚಂದ್ರಲೀಲಾ ಗಾಂಧಿನಗರ ಕಾವೂರು ನಲ್ಲಿ ಬೆಳಿಗ್ಗೆ 6-30, 7-30 ಹಾಗೂ 10-30 ರಿಂದ 4-30 ಹಾಗೂ 5-30 ರಿಂದ 6-00 ರವರೆಗೆ ದೇರೆಬೈಲು ಯುವಕ ಮಂಡಳಿ, ದೇರೆಬೈಲು, ಬೆಳಿಗ್ಗೆ ಮತ್ತು ಸಂಜೆ 5-00 ರಿಂದ 6-00 ರವರೆಗೆ ನಡೆಯಲಿದೆ. ಆಸಕ್ತರು ತರಬೇತಿಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು.
ನೊಂದಾವಣೆಗಾಗಿ ಸಂಪರ್ಕಿಸಿ : ಕುಶಾಲಪ್ಪ ಗೌಡ. ಎನ್.M.Sc (Yoga), M.S.W., M.Phil.. ನಿರ್ದೇಶಕರು, ಯೋಗ ಚಿಕಿತ್ಸಕರು, ಆವಿಷ್ಕಾರ ಯೋಗ, ಗುರುಪ್ಲಾಜಾ, 4ನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಹತ್ತಿರ, ಬಿಜೈ, ಮಂಗಳೂರು ದೂ :0824-2224442, 9845588740
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.