ನವದೆಹಲಿ: ನಿಷೇಧಿತ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಬದಲು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಮುಂದಿನ ಎರಡು ಆವೃತ್ತಿಗಳಿಗೆ ಪುಣೆ ಹಾಗೂ ರಾಜ್ಕೋಟ್ ತಂಡಗಳು ಸೇರ್ಪಡೆಯಾಗಿವೆ ಎಂದು ಬಿಸಿಸಿಐ ತಿಳಿಸಿದೆ.
ಸಂಜೀವ್ ಗೋಯೆಂಕಾ ಅವರ ನ್ಯೂ ರೈಸಿಂಗ್ ಐಪಿಎಲ್ ಹರಾಜಿನಲ್ಲಿ 16 ಕೋಟಿಗೆ ಪುಣೆ ತಂಡವನ್ನು ಖರೀದಿಸಿದ್ದರೆ, ಇಂಟೆಕ್ಸ್ ಕಂಪೆನಿ 10 ಕೋಟಿ ನೀಡಿ ರಾಜ್ಕೋಟ್ ತಂಡದ ಒಡೆತನ ಪಡೆದಿದೆ.
2013ರ ಐಪಿಎಲ್ ಆವೃತ್ತಿಯ ಸಂದರ್ಭ ಸಿಎಸ್ಕೆ ಅಧಿಕಾರಿ ಗುರುನಾಥ್ ಮೀಯಪ್ಪನ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ಅವರ ಮೇಲೆ ಬೆಟ್ಟಿಂಗ್ ಆರೋಪ ಹೊರಿಸಲಾಗಿದ್ದು, ಸುಪ್ರೀಂ ಕೋರ್ಟ್ ಈ ತಂಡಗಳನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿದೆ.
ಪುಣೆ ಮತ್ತು ರಾಜ್ಕೋಟ್ ತಂಡಗಳು ಚೆನ್ನೈ ಮತ್ತು ಆರ್.ಆರ್ ಬದಲಿಯಾಗಿ ಆಡಲಿವೆ.
ಮುಂಬರುವ ಐಪಿಎಲ್ 9ನೇ ಆವೃತ್ತಿಯು ಎಪ್ರಿಲ್ 9ರಿಂದ ಮೇ 29ರ ವರೆಗೆ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ತಿಳಿಸಿದ್ದಾರೆ. ಐಪಿಎಲ್ ತಂಡಗಳ ಆಟಗಾರರ ಹರಾಜು ಪ್ರಕ್ರಿಯೆಯು ಫೆ.6ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಈ ವೇಳೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.