ಮನೇರೋ: ಆಸ್ಟ್ರಿಯಾ ರಾಣಿ ಎಲಿಜಬೆತ್ಗಾಗಿ ಬೇಯಿಸಲಾಗಿದ್ದ 118 ವರ್ಷಗಳ ಹಳೆಯ ಕೇಕ್ನ್ನು ಈ ವಾರ ಇಟಾಲಿಯನ್ ಕ್ಯಾಸಲ್ನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಇಟಾಲಿಯನ್ ಕ್ಯಾಸಲ್ ರಾಜ ಮನೆತನದ ರಜಾ ಅರಮನೆಯಾಗಿತ್ತು.
ರಾಣಿ ಎಲಿಜಬೆತ್ಗೆ ಕಾಣಿಕೆಯಾಗಿ ನೀಡಲಾಗಿದ್ದ ಗಾಜಿನ ಬಾಕ್ಸ್ ಒಳಗೆ ಮುಕುಟದ ಒಡವೆಯಂತೆ ಇರುವ ಕಂದು ಬಣ್ಣದ ಈ ಕೇಕ್ ಮನೇರೋದ ದಕ್ಷಿಣ ಟೈರೋಲಿಯಾ ಪಟ್ಟಣದ ಕ್ಯಾಸಲ್ ಟ್ರಾಟ್ಮ್ಯಾನ್ಸ್ಡ್ರಾಫ್ ವಸ್ತು ಸಂಗ್ರಹಾಲಯದ ಆಕರ್ಷಣೆಯಾಗಿದೆ.
ಆಸ್ಟ್ರೋ- ಹಂಗೇರಿಯನ್ ಸಾಮ್ರಾಜ್ಯದ ಭಾಗವಾಗಿದ್ದ ಮನೇರೋದ ಪ್ರವಾಸಿ ತಾಣಕ್ಕೆ ಭೇಟಿ ನೀಡಿದ್ದ ಸಂದರ್ಭ ಅದರ ಮಾಲೀಕ ಸಿಸ್ಸಿಗೆ ಈ ಕೇಕ್ನ ಸ್ಲೈಸ್ ಒಂದನ್ನು ನೀಡಿದ್ದು, ಸೆಪ್ಟೆಂಬರ್ 1897ರಿಂದ ಇದನ್ನು ಸಂರಕ್ಷಿಸಲಾಗಿದೆ. ಈ ಪ್ರವಾಸಿ ತಾಣಕ್ಕೆ ಸಿಸ್ಸಿ ಭೇಟಿ ನೀಡುವುದನ್ನು ನಿಲ್ಲಿಸಿದ ಬಳಿಕ ಪ್ರವಾಸಿ ತಾಣದ ಮಾಲೀಕರು ಇದನ್ನು ಗಾಜಿನ ಪಾತ್ರೆಯಲ್ಲಿ ಸಂರಕ್ಷಿಸಿದ್ದು, ಇಂದಿನ ಪೀಳಿಗವರೆಗೆ ಮುಂದುವರೆದಿದೆ ಎಂದು ವಸ್ತು ಸಂಗ್ರಹಾಲಯದ ವಕ್ತಾರ ಎವಲಿನ್ ರೆಸೋ ತಿಳಿಸಿದ್ದಾರೆ.
ಸಕ್ಕರೆ ಲೇಪನವಿಲ್ಲದ ಈ ಕೇಕ್ ಬ್ರೆಡ್ನ್ನು ಹೋಲುವ ಒಣ ಮಿಶ್ರಣವಾಗಿದ್ದು, ಮರದ ಕಟ್ಟಿಗೆಯಷ್ಟು ಗಟ್ಟಿಯಾಗಿದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.