ನವದೆಹಲಿ: ಹಿಂಸಾಚಾರದಿಂದ ತತ್ತರಿಸಿ ಹೋಗಿರುವ ಯೆಮೆನ್ನಲ್ಲಿನ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಆರಂಭಿಸಿದ ಕಾರ್ಯಾಚರಣೆ ಶುಕ್ರವಾರ ಅಂತ್ಯಗೊಂಡಿದ್ದು, ಒಟ್ಟು 5,5೦೦ ಮಂದಿಯನ್ನು ರಕ್ಷಿಸಲಾಗಿದೆ.
ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಿಸಿದವರಲ್ಲಿ 4,640 ಮಂದಿ ಭಾರತೀಯರಾಗಿದ್ದರೆ, 960 ಮಂದಿ ವಿದೇಶಿಗರಾಗಿದ್ದಾರೆ. ಕೊನೆ ಹಂತದ ಕಾರ್ಯಾಚರಣೆಯಲ್ಲಿ 349 ಮಂದಿಯನ್ನು ಕಾಪಾಡಲಾಗಿದೆ. ಇವರಲ್ಲಿ 46 ಮಂದಿ ಮಾತ್ರ ಭಾರತೀಯರಾಗಿದ್ದಾರೆ.
ವಿಶೇಷವೆಂದರೆ ಭಾರತೀಯ ರಕ್ಷಣಾ ಪಡೆ ಇಂದು 3 ದಿನದ ಹಸುಗೂಸು ಹಾಗೂ ಅದನ್ನು ಪೋಷಿಸುತ್ತಿದ್ದ ವೈದ್ಯರನ್ನೂ ಸುರಕ್ಷಿತವಾಗಿ ಅವರ ರಾಷ್ಟ್ರಕ್ಕೆ ಸೇರಿಸಿದೆ.
ಕಾರ್ಯಾಚರಣೆಯನ್ನು ಸಫಲಗೊಳಿಸಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವ ವಿಕೆ ಸಿಂಗ್ ಅವರಿಗೆ ಭವ್ಯ ಸ್ವಾಗತವನ್ನೂ ಕೋರಲಾಗಿದೆ. ಮಹತ್ವದ ಪಾತ್ರವನ್ನು ನಿಭಾಯಿಸಿದ ಭಾರತೀಯ ರಕ್ಷಣಾಪಡೆಗಳಿಗೆ ಪ್ರಶಂಶೆಗಳ ಸುರಿಮಳೆಯೇ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.