ನವದೆಹಲಿ: ಭಾರತದ ಮೇಕ್ ಇನ್ ಇಂಡಿಯಾ ಯೋಜನೆ ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ವಿದ್ಯಾರ್ಥಿಗಳ ಮೇಲೆ ಉತ್ತಮ ಪ್ರಭಾವ ಬೀರಿದಂತೆ ಕಂಡು ಬರುತ್ತಿದೆ. ಸಾಗರೋತ್ತರವಾಗಿ ವಾರ್ಷಿಕ 1 ಕೋಟಿಗೂ ಅಧಿಕ ಸಂಬಳ ಪಡೆಯಬಹುದಾಗಿದ್ದ 4 ಐಐಟಿ ವಿದ್ಯಾರ್ಥಿಗಳು ಈ ನೌಕರಿಯ ಅವಕಾಶವನ್ನು ತಿರಸ್ಕರಿಸಿ ಸ್ಥಳೀಯ ಉದ್ಯೋಗವನ್ನು ಆರಿಸಲು ಮುಂದಾಗಿದ್ದಾರೆ. ಈ ವಿದ್ಯಾರ್ಥಿಗಳು ೮ಕ್ಕೂ ಅಧಿಕ ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುವ ಅವಕಾಶ ಪಡೆದಿದ್ದರು ಎನ್ನಲಾಗಿದೆ.
ವಿವಿಧ ಕಂಪೆನಿಗಳು ಪ್ರತಿ ವರ್ಷ ಐಐಟಿಗಳಿಗೆ ಬರುತ್ತಿದ್ದು, ಉದ್ಯೋಗ ಆಫರ್ಗಳನ್ನು ನೀಡುತ್ತವೆ. ಇದರಲ್ಲಿ ಗೂಗಲ್, ವೀಸಾ, ಒರಾಕಲ್ ಮತ್ತು ಮೈಕ್ರಾಸಾಫ್ಟ್ ಕಂಪೆನಿಗಳೂ ಸೇರಿವೆ. ಆದರೆ ಈ ವಿದ್ಯಾರ್ಥಿಗಳು ದೇಶಿಯ ಉದ್ಯೋಗಗಳನ್ನು ಆಯ್ದುಕೊಂಡಿದ್ದಾರೆ.
ಸಾಗರೋತ್ತರ ಕಂಪೆನಿಗಳನ್ನು ಹೋಲಿಸಿದರೆ ದೇಶೀಯ ಕಂಪೆನಿಗಳು ಒಂದನೇ ಐದರಷ್ಟು ಸಂಬಳ ಮಾತ್ರ ನೀಡುತ್ತವೆ. ಹಣಕಾಸು, ತಂತ್ರಜ್ಞಾನ, ಇ-ಕಾಮರ್ಸ್ ಕಂಪೆನಿಗಳು ಬಹುತೇಕ ಕ್ಯಾಂಪಸ್ಗಳಿಗೆ ಸಂಪರ್ಕಿಸುತ್ತಿವೆ. ನರೇಂದ್ರ ಮೋದಿ ಸರ್ಕಾರವು ಶೈಕ್ಷಣಿಕ ಸಂಸ್ಥೆಗಳು, ಅಕಾಡೆಮಿಗಳು, ಇನ್ನಿತರ ಉದ್ದಿಮೆಗಳಿಗೆ ಮೇಕ್ ಇನ್ ಇಂಡಿಯಾದ ಮೂಲಕ ಸ್ವದೇಶಿ ಉತ್ಪಾದನೆ ಮೂಲಕ ಉದ್ಯೋಗ ಸೃಷ್ಟಿ, ಹೆಚ್ಚಿನ ಬೆಳವಣಿಗೆಗೆ ಉತ್ತೇಜಿಸುತ್ತಿದೆ. ಈ ಯೋಜನೆ ದೆಹಲಿಯ ಐಐಟಿಗಳಲ್ಲಿ ಬದಲಾವಣೆ ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.