ಚಂದ್ರತಾಲ್ ಸರೋವರ ಪ್ರತಿ ಭಾರತೀಯ ತೆರಳಲು ಇಚ್ಛಿಸುವ ಸ್ಥಳಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಸರೋವರದ ಸುತ್ತಲೂ ಸುತ್ತುವರಿದ ಮಂಜುಗಡ್ಡೆಯ ಹೊದಿಕೆ ಪ್ರತಿಯೊಂದೂ ಚಾರಣಿಗರನ್ನು ಆಕರ್ಷಿಸುವಂತದ್ದು. ಇಲ್ಲಿಗೆ ಚಾರಣಕ್ಕೆ ಬಂದವರು ತಮ್ಮ ಜೀವನದ ಅದ್ಭುತ ಅನುಭವ ಪಡೆದು ಹಿಂದಿರುಗುತ್ತಾರೆ.
’ಚಂದ್ರತಾಲ್’ ಎಂದರೆ ’ಚಂದ್ರನ ಸರೋವರ’. ಇದು ಹಿಮಾಲಯ ಕಣಿವೆಯಲ್ಲಿ 14,000 ಅಡಿ ಎತ್ತರದಲ್ಲಿದೆ. ಆದರೆ ಹಲವಾರು ಚಾರಣಿಗರ ಆಗಮನದಿಂದ ಇಲ್ಲಿ ಪಾಲಿಥೀನ್ ಚೀಲ, ಚಿಪ್ಸ್ ಪ್ಯಾಕೆಟ್ ಇನ್ನಿತರ ತಿರಸ್ಕೃತ ವಸ್ತುಗಳು ಅಲ್ಲಲ್ಲಿ ಬಿದ್ದು ಸರೋವರದ ಅಂದಕ್ಕೆ ಕಪ್ಪು ಚುಕ್ಕೆಯಾಗಿವೆ. ಕಳೆದ ಕೆಲವು ವರ್ಷಗಳಿಂದ ಚಂದ್ರತಾಲ್ ಸರೋವರದ ಸುತ್ತ ಕಸದ ರಾಶಿ ಏರುತ್ತಲೇ ಇದೆ.
ಈ ಕಸದ ರಾಶಿಗೆ ಮುಕ್ತಿ ಕಾಣಿಸಬೇಕು ಎಂದು ಪಣತೊಟ್ಟ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯೋಗಿ ಲೋವಿಶ್ ತೆಕ್ವಾಣಿ, ಗುರ್ಗಾಂವ್ನ ಡಿಜಿಟಲ್ ಮಾರುಕಟ್ಟೆ ಉದ್ಯೋಗಿ ಹಿಮಾಂಶು ತೋಮರ್, ಇಲ್ಲಿನ ಸ್ಥಳೀಯರಾದ ಬಿಷನ್ ಠಾಕುರ್, ಶೀರಬ್ ಗ್ಯಾಲ್ಸಟನ್ ಪೂರನ್ ಸಿಂಗ್ ಜೊತೆಗೂಡಿ ಚಂದ್ರತಾಲ ಸರೋವರಕೆ ತೆರಳಿ ಕಸವನ್ನು ಸ್ವಚ್ಛಗೊಳಿಸುವ ಕಾಯಕಕ್ಕೆ ಮುಂದಾಗಿದ್ದಾರೆ.
ಟೀ ಕಪ್ಸ್, ಪ್ಲಾಸ್ಟಿಕ್, ಬಿಯರ್ ಬಾಟಲ್ಗಳು, ಲಿಪ್ಸ್ಟಿಕ್, ಕನ್ನಡಿಗಳು ಸೇರಿದಂತೆ ಸುಮಾರು 22 ಗೋಣಿ ಚೀಲಗಳಷ್ಟು ಕಸದ ಮೂಟೆಯನ್ನು ಇವರು ಸ್ವಚ್ಛಗೊಳಿಸಿದ್ದಾರೆ. ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಇವರು ಸರೋವರವನ್ನು ಸ್ವಚ್ಛಗೊಳಿಸಿ ಇತರರಿಗೆ ಸ್ಫೂರ್ತಿ ತುಂಬಿದ್ದಾರೆ. ಇನ್ನು ಹೆಚ್ಚಿನ ಸ್ವಚ್ಛಗೊಳಿಸುವ ಜವಾಬ್ದಾರಿ ನಮ್ಮ ಹಾಗೂ ಇನ್ನಿತರ ಚಾರಣಿಗರದ್ದಾಗಿದೆ.
ಚಂದ್ರತಾಲ್ ಸರೋವರಕ್ಕೆ ಬರುವ ಪ್ರತಿಯೊಬ್ಬರಿಗೂ ಸ್ವಾಗತವಿದೆ, ಆದರೆ ಇದನ್ನು ಕಸದ ತೊಟ್ಟಿಯಂತೆ ಮಾಡದೆ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.