ಚಂಡೀಗಢ: ಮೊದಲ ಸಿಖ್ ಗುರು ಗುರು ನಾನಕ್ ಅವರ 546ನೇ ಜನ್ಮ ವಾರ್ಷಿಕೋತ್ಸವವು ನ.೨೫ರಂದು ಆಚರಿಸಲಾಗುತ್ತಿದ್ದು, ವಿಶ್ವದಾದ್ಯಂತ ಸಿಖ್ಖರು ಗುರುದ್ವಾರಾಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ಪವಿತ್ರ ದಿನವನ್ನು ಆಚರಿಸುತ್ತಾರೆ.
ಬೆಳಗಿನ ಜಾವ ಗುರುದ್ವಾರಾಗಳಿಂದ ಪ್ರಭಾತ್ ಫೇರಿಯ ಮೂಲಕ ಹೊರಡುವ ಮೆರವಣಿಗೆಯೊಂದಿಗೆ ಈ ಹಬ್ಬವು ಆರಂಭಗೊಳ್ಳುತ್ತದೆ. ಅನಂತರ ಮೆರವಣಿಗೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳಿ ಭಜನೆ, ಶ್ಲೋಕ ಪಠಣದ ಮೂಲಕ ಮುಂದೆ ಸಾಗುತ್ತದೆ. ಗುರುದ್ವಾರಾಗಳಲ್ಲಿ ಅಖಂಡ ಪಥ್-ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ನ್ನು ಹಬ್ಬಕ್ಕೂ 2 ದಿನ ಮುನ್ನ 48 ಗಂಟೆಗಳ ಕಾಲ ನಿರಂತರ ಪಠಣ ಮಾಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.