
ಶ್ರೀನಗರ: ಜಮ್ಮುವಿನ ನಾಗ್ರೋಟಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇವಯಾನಿ ರಾಣಾ ಅವರು 24,647 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ನಾಗ್ರೋಟಾ ಉಪಚುನಾವಣೆಯ ಎಣಿಕೆ ಇಂದು ನಡೆದಿದ್ದು, 11 ನೇ ಸುತ್ತಿನ ಅಂತ್ಯದ ವೇಳೆಗೆ, ಬಿಜೆಪಿ 42,350 ಮತಗಳನ್ನು ಗಳಿಸಿದರೆ, ಜೆಕೆಎನ್ಪಿಪಿ ಅಭ್ಯರ್ಥಿ ಹರ್ಷ್ ದೇವ್ ಸಿಂಗ್ 17,703 ಮತಗಳನ್ನು ಗಳಿಸಿದರು. ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಶಮೀಮ್ ಬೇಗಂ 10,872 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.
ಮೂರನೇ ಸುತ್ತಿನ ವೇಳೆಗೆ, ಬಿಜೆಪಿ 11,581 ಮತಗಳನ್ನು ಗಳಿಸಿದ್ದರೆ, ಜೆಕೆಎನ್ಪಿಪಿ ಅಭ್ಯರ್ಥಿ 4,280 ಮತಗಳನ್ನು ಗಳಿಸಿದ್ದರೆ, ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಶಮೀಮ್ ಬೇಗಂ 2,464 ಮತಗಳನ್ನು ಗಳಿಸಿದ್ದಾರೆ.
ದೇವಯಾನಿ ರಾಣಾ ಅವರು ಬಿಜೆಪಿ ಶಾಸಕ ದೇವೇಂದರ್ ರಾಣಾ ಅವರ ಪುತ್ರಿ, ದೇವೇಂದರ್ ನಿಧನದಿಂದ ನಾಗ್ರೋಟಾ ಉಪಚುನಾವಣೆ ನಡೆಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


