ಬೆಳ್ತಂಗಡಿ : ಸಿನಿಮೀಯ ಮಾದರಿಯಲ್ಲ ಬೆಳ್ತಂಗಡಿಯ ಪೋಲೀಸ್ಠಾಣೆಗೆ ನುಗ್ಗಿದವ್ಯಕ್ತಿಯೋರ್ವ ಗನ್ತೋರಿಸಿ ಬೆದರಿಸಿ ರದ್ದಾಂತವೆಬ್ಬಿಸಿದ ಘಟನೆ ಗುರುವಾರ ಮಧ್ಯಾಹ್ನದ ವೇಳೆಗೆ ಸಂಭವಿಸಿದೆ. ಪೋಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆತನಕೈಯಲ್ಲಿದ್ದ ಗನ್ಅನ್ನು ವಶಪಡಿಸಿಕೊಂಡಿದ್ದು ಆತನನ್ನು ಹಾಗೂ ಆತನೊಂದಿಗಿದ್ದ ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಹಾಸನ ನಿವಾಸಿಗಳಾದ ದಯಾನಂದ (37), ರವಿ (40), ರಂಗನಾಧ ಭಟ್ (46),ಹಾಗೂ ಬೆಳಗಾವಿ ನಿವಾಸಿ ಬಸವರಾಜ್ಕೊಡಚಿ ಎಂಬವರಾಗಿದ್ದಾರೆ. ಮದ್ಯಾಹ್ನದ ವೇಳೆಗೆ ಠಾಣೆಗೆ ಬಂದ ದಯಾನಂದ ಏಕಾ ಏಕಿ ಅಲ್ಲಿದ್ದ ಪೋಲೀಸರಿಗೆ ಬಾಯಿಗೆ ಬಂದಂತೆ ಬೈಯ್ಯಲಾರಂಭಿಸಿದ್ದಾನೆ. ಯಾರೆಂದು ಕೇಳಿದರೆ ಅದಕ್ಕೆ ಉತ್ತರಿಸದೆ ಹಿರಿಯ ಪೋಲೀಸ್ ಅಧಿಕಾರಿಗಳ ಹೆಸರನ್ನು ಹೇಳಿ ಅವರ ಪರಿಚಯವಿದೆ ಅವರು ನನ್ನ ಗೆಳೆಯರು ಎಂದಿದ್ದಾನೆ ಅಲ್ಲದೆ ನಿಮ್ಮ ಎಸ್ಪಿ ಐಜಿಯ ಪರಿಚಯವಿದೆ ನಿಮಗೆ ಬೆಂಗಳೂರಿನಿಂದ ಫೋನ್ ಬರುತ್ತೆ ಆಗ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಪೋಲೀಸರು ಮತ್ತೆ ಪ್ರಶ್ನಿಸಿದಾಗ ನೇರವಾಗಿ ತನ್ನಬಳಿ ಇದ್ದ ಗನ್ ಅನ್ನು ತೆಗೆದ ಆತ ನೇರವಾಗಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೋಲೀಸ್ ಪೇದೆ ಹರೀಶ್ಗೆಗುರಿಯಿಟ್ಟಿದ್ದಾರೆ ಮುಖ್ಯ ಪೇದೆ ಲೋಕನಾಧ್ಗೂ ಬೆದರಿಕೆಯೊಡ್ಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೋಲೀಸರು ಆತನ ಕೈಯಿಂದ ಬಂದೂಕನ್ನು ಕಸಿದುಕೊಂಡಿದ್ದಾರೆ ಅಲ್ಲದೆ ಆತನನ್ನು ವಶಕ್ಕೆ ಪಡೆದಿದ್ದಾರೆ ಆತನೊಂದಿಗಿದ್ದ ಇತರರೂ ಆತನಿಗೆ ಸಹಕರಿಸಿದ್ದು ಪೊಲೀಸರು ಅವರನ್ನೂ ವಶ ಪಡಿಸಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಬೆಳ್ತಂಗಡಿ ಎಸ್ಸೈ ಸಂದೇಶ್ ವಶದೊಲ್ಲಿದ್ದವರನ್ನು ವಿಚಾರಣೆ ನಡೆಸಿದಾಗ ಆತತಾನು ಮಾನವಹಕ್ಕುಗಳ ಕಾರ್ಯಕರ್ತಎಂದು ಹೇಳಿಕೊಂಡಿದ್ದಾರೆ.
ಆತನ ಬಳಿ ಇದ್ದ ಗುರುತಿನಚೀಟಿಯನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಅದರಲ್ಲಿ ಹ್ಯೂಮನ್ನ್ರೈಟ್ ಫೆಡರೇಶನ್ ರಿ ಎಂದು ಇದ್ದು ಅಧ್ಯಕ್ಷರು ಸೆಂಟ್ರಲ್ಕೌನ್ಸಿಲ್ ಎಂದು ಬರೆಯಲಾಗಿದೆ ಇದು ಯಾವುದೇ ಅಧಿಕೃತ ಮಾನವಹಕ್ಕುಗಳ ಸಂಘಟನೆಯಾಗಿರುವ ಬಗ್ಗೆ ಮಾಹಿತಿಯಿಲ್ಲವಾಗಿದ್ದು ಇವರು ಯಾವುದೋ ಸಂಚಿನಿಂದ ಬೆಳ್ತಂಗಡಿಗೆ ಬಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಠಾಣೆಗೆ ನುಗ್ಗಿ ಬಂದೂಕು ತೆಗೆದ ದಯಾನಂದ ಮದ್ಯ ಸೇವಿಸಿದ್ದ ಎಂದು ತಿಳಿದು ಬಂದಿದೆ.
ನೇರವಾಗಿ ಈತ ಠಾಣೆಗೆ ನುಗ್ಗಿದ ಶೈಲಿಗೆ ಅಲ್ಲಿದ್ದ ಸಾರ್ವಜನಿಕರು ಹಾಗೂ ಪೋಲೀಸರು ಆರಂಭದಲ್ಲಿ ಈv ಯಾರೋ ಹಿರಿಯ ಅಧಿಕಾರಿಯಾಗಿರಬೇಕು ಎಂದು ಭಾವಿಸಿದ್ದರು ಆದರೆ ಆತ ಗನ್ನ್ ತೆಗೆದಾಗ ಈತನ ವರ್ತನೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಈಗಾಗಲೆ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಿರುವ ಹಿನ್ನಲೆಯಲ್ಲಿ ಈ ತಂಡ ಯಾವ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದಾರೆ ಎಂಬ ಬಗ್ಗೆ ಅನುಮಾನಗಳಿದ್ದು ಅದರಲ್ಲಿಯೂ ಇವರು ಠಾಣೆಗೆ ಬಂದಿರುವ ಕಾರಣ ಇನ್ನೂ ವಿಚಿತ್ರವಾಗಿದೆ. ಒಟ್ಟಾರೆಯಾಗಿ ಪೋಲೀಸರು ಇಡೀ ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಇವರಿಂದ ಯಾವ ಮಾಹಿತಿಗಳು ಹೊರಬೀಳಲಿದೆ ಎಂಬ ಬಗ್ಗೆ ಕಾದು ನೋಡಬೇಕಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.