ನವದೆಹಲಿ : ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಟಿ. ಎಸ್. ಠಾಕೂರ್ ಅವರನ್ನು ನೇಮಿಸಲು ಶಿಫಾರಸ್ಸು ಮಾಡಲಾಗಿದೆ. ಠಾಕೂರ್ರವರ ಹೆಸರನ್ನು ಪ್ರಸ್ತುತ ಸಿಜೆಐ ಆಗಿರುವ ಎಚ್. ಎಲ್. ದತ್ತುರವರು ಶಿಫಾರಸ್ಸು ಮಾಡಿದ್ದಾರೆ.
ಎಚ್. ಎಲ್. ದತ್ತು ರವರು ಡಿಸೆಂಬರ್ 2 ರಂದು ನಿವೃತ್ತರಾಗಲಿದ್ದಾರೆ. ಅಂದು ನ್ಯಾ. ಟಿ. ಎಸ್. ಠಾಕೂರ್ರವರು ಮುಖ್ಯ ನ್ಯಾಯಮೂರ್ತಿಯಾಗಲಿರುವರು. ಇವರು ದೇಶದ 43ನೇ ಮುಖ್ಯ ನ್ಯಾಯಮೂರ್ತಿಯಾಗಲಿರುವರು.
ಕಾನೂನು ಸಚಿವಾಲಯದಿಂದ ಒಪ್ಪಿಗೆ ದೊರೆತ ಬಳಿಕ, ಠಾಕೂರ್ರವರ ನೇಮಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಷ್ಟ್ರಪತಿ ಕಛೇರಿಗೆ ಕಳುಹಿಸಿಕೊಡಲಾಗುವುದು. ರಾಷ್ಟ್ರಪತಿಯವರ ಅನುಮತಿ ನಂತರ ಅಧಿಕೃತ ನೇಮಕ ಪ್ರಕಟಗೊಳ್ಳಲಿದೆ.
1952ರ ಜನವರಿ 4ರಂದು ಜನಿಸಿದ ಠಾಕೂರ್ರವರಿಗೆ 63 ವರ್ಷವಾಗಿದ್ದು, ಅವರು ವಕೀಲರಾಗಿ ವೃತ್ತಿಯನ್ನು ಆರಂಭಿಸಿದ್ದರು. 1994 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ನಂತರ ಕರ್ನಾಟಕ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಗಿತ್ತು. ಇಲ್ಲಿ ಸುಮಾರು ಒಂದೂವರೆ ವರ್ಷ ಸೇವೆ ಸಲ್ಲಿಸಿದ್ದರು.2009 ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.