ಜೈಪುರ: ರಾಜಸ್ಥಾನದಲ್ಲಿ ನಡೆಯಲಿರುವ ರಾಜಸ್ಥಾನ ರಿಸರ್ಜೆಂಟ್ ಸಹಭಾಗಿತ್ವ ಸಭೆಯ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಆಟೋ ರಿಕ್ಷಾಗಳನ್ನು ಬಿಡುಗಡೆ ಮಾಡಿದ್ದಾರೆ.
ರಾಜ್ಯದ ಸಂಸ್ಕೃತಿ ಪ್ರದರ್ಶಿಸುವ ಕಲೆಗಳಿಂದ ಕೂಡಿದ ಸುಮಾರು 100 ವರ್ಣರಂಜಿತ ರಿಕ್ಷಾಗಳನ್ನು ಬಿಡುಗಡೆಗೊಳಿಸಲಾಗಿದ್ದು, ಇದು ರಾಜಸ್ಥಾನದ ಜಾನಪದ ಕಲೆಯನ್ನು ಪ್ರದರ್ಶಿಸಲಿದೆ ಎಂದು ಓರ್ವ ವಕ್ತಾರರು ಹೇಳಿದ್ದಾರೆ.
ನ.19 ಮತ್ತು 20ರಂದು ನಡೆಯಲಿರುವ ಸಭೆಯ ಸಂದರ್ಭ ಈ ರಿಕ್ಷಾಗಳು ಸಂಗನೇರ್ ವಿಮಾನ ನಿಲ್ದಾಣ, ಹವಾ ಮಹಲ್, ಜಲ್ ಮಹಲ್, ಆಲ್ಬರ್ಟ್ ಹಾಲ್, ಅಂಬರ್ ಕೋಟೆ ಮುಂತಾದ ಪ್ರದೇಶಗಳಲ್ಲಿ ಸಂಚರಿಸಲಿದ್ದು ಯಾತ್ರಿಕರಿಗೆ ಕಲಾತ್ಮಕ ವೈಭವವನ್ನು ಸಾರಲಿವೆ ಎಂದು ಹೇಳಲಾಗಿದೆ.
ಇಂದು ವಸುಂಧರಾ ರಾಜೆಯವರೇ ಸ್ವತಃ ವರ್ಣರಂಜಿತ ಆಟೋದಲ್ಲಿ ತಮ್ಮ ನಿವಾಸದಿಂದ ಸಭೆ ನಡೆಯಲಿರುವ ಸ್ಥಳಕ್ಕೆ ಪ್ರಯಾಣಿಸಿದರು.
ಆಟೋಗಳಿಗೆ ನೀಡಿದ ಕಲಾತ್ಮಕ ಮೆರುಗನ್ನೇ ಕೆಲ ಬಸ್ ತಂಗು ನಿಲ್ದಾಣ, ಹೋರ್ಡಿಂಗ್, ಮತ್ತಿನ್ನಿತರ ಕಡೆಗಳಲ್ಲೂ ರಾಜಸ್ಥಾನದ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ ಜಾನಪದ ಮತ್ತು ಬುಡಕಟ್ಟು ಕಲೆಗಳನ್ನು ಚಿತ್ರಿಸಲಾಗುವುದು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.