ವಾಷಿಂಗ್ಟನ್: ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಭಾರತ ’ದೊಡ್ಡ ಅಣುಶಕ್ತಿ ಯೋಜನೆ’ ಹೊಂದಿರುವ ರಾಷ್ಟ್ರ ಎಂದು ಯುಎಸ್ ಆಧಾರಿತ ಚಿಂತಕರು ಹೇಳಿದ್ದಾರೆ. ಭಾರತವು 2014ರ ಅಂತ್ಯದಲ್ಲೇ ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ಹೊಂದಿದ 75ರಿಂದ 125ರ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರಗಳ ಸ್ಟಾಕ್ ಹೊಂದಿತ್ತು ಎಂದು ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಸಂಸ್ಥೆ ಬಿಡುಗಡೆ ಮಾಡಿದ ವರದಿ ಭದ್ರತಾ ಹೇಳಿದೆ.
ಭಾರತವು 138 ಸರಾಸರಿಯ ಪರಮಾಣು ಶಸ್ತ್ರಾಸ್ತ್ರಗಳು ಮತ್ತು 110ರಿಂದ 175 ಶ್ರೇಣಿಯ ಸಾಮಾನ್ಯ ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಭದ್ರತಾ ಸಂಸ್ಥೆ ತಿಳಿಸಿದೆ. ಶಸ್ತ್ರಾಸ್ತ್ರಗಳ ಉತ್ಪಾದನೆ, ಕೊಳವೆ ಮಾರ್ಗಗಳಲ್ಲಿ ಅಳವಡಿಕೆಯಾಗುವ ಮತ್ತು ಮೀಸಲು ಪ್ಲುಟೋನಿಯಂ ಪ್ರಮಾಣ ಆಧರಿಸಿದರೆ ಶೇ.70ರಷ್ಟು ಮಾತ್ರ ಯುರೇನಿಯಂ ದರ್ಜೆಯ ಅಣ್ವಸ್ತ್ರಗಳು ಹೊಂದಿವೆ ಎಂದು ಸಂಸ್ಥೆಯ ವರದಿ ತಿಳಿಸಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭಾರತ ಅತಿ ದೊಡ್ಡ ಪ್ರಮಾಣದಲ್ಲಿ ನಾಗರಿಕ ಮತ್ತು ಮಿಲಿಟರಿ ಪ್ಲುಟೋನಿಯಂ ಹಾಗೂ ಉನ್ನತ ಮಟ್ಟದಲ್ಲಿ ಯುರೇನಿಯಂ ಸ್ಟಾಕ್ ಹೊಂದಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.