ರಾಷ್ಟ್ರೀಯ : ಪ್ರಧಾನಿ ನರೇಂದ್ರ ಮೋದಿಯವರ ಜಮ್ಮು ಕಾಶ್ಮೀರದ ಭೇಟಿ ಹೊಸ ತಿರುವು ಕೊಡಲಿದ್ದು, ಇದು ಜಮ್ಮು ಕಾಶ್ಮೀರದ ಇತಿಹಾಸದಲ್ಲಿ ಹೊಸ ನಿರೀಕ್ಷೆ ಮೂಡಿಸಲಿದೆ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸೈಯದ್ ಹೇಳಿದ್ದಾರೆ.
ಈ ಹಿಂದೆ 2003 ರಲ್ಲಿ ಶೇರ್-ಇ-ಕಾಶ್ಮೀರ ಮೈದಾನದಲ್ಲಿ ವಾಜಪೇಯಿ ಅವರು ಸಮಾವೇಶದಲ್ಲಿ ಭಾಗವಹಿಸಿದ್ದನ್ನು ಸ್ಮರಿಸುತ್ತಾ, ನರೇಂದ್ರ ಮೋದಿಯವರೂ ಸಹ ಅದೇ ಮೈದಾನದಲ್ಲಿ ನ. 7 ರಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮೋದಿಯವರು ವೈಯಕ್ತಿಕವಾಗಿ ನನ್ನ ಬಳಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಕೆಲಸಗಳ ವೇಗ, ರಾಜ್ಯದಲ್ಲಿ ರೈಲ್ವೆ ನೆಟ್ವರ್ಕ್ ವ್ಯಾಪ್ತಿ, ಆರೋಗ್ಯ, ಶಿಕ್ಷಣ, ಹೀಗೆ ವಿವಿಧ ಕ್ಷೇತ್ರಗಳ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ನಾನು ಮೋದಿಯವರನ್ನು ಕೆಲವೇ ಸಲ ಭೇಟಿಯಾಗಿರುವುದು. ಅವರು ಜಮ್ಮು-ಕಾಶ್ಮೀರದ ಜನರ ಮನಸ್ಸನ್ನು ಗೆಲ್ಲಬಲ್ಲ ವ್ಯಕ್ತಿ ಎಂದಿದ್ದಾರೆ.
ಭಾರತ ಜಗತ್ತಿನ ಶಕ್ತಿಯಾಗಿ ಹೊರಹೊಮ್ಮಲು ಪಾಕಿಸ್ಥಾನ ಸೇರಿದಂತೆ ಎಲ್ಲಾ ನೆರೆಹೊರೆಯವರೊಂದಿಗೆ ಆರೋಗ್ಯಕರ ಸ್ನೇಹ ಸಂಬಂಧಗಳನ್ನು ನಿರ್ವಹಿಸಲು ಮುಂದಾಗುವುದು ಒಳ್ಳೆಯದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.