ನವದೆಹಲಿ: ವಿಶ್ವದಲ್ಲೇ ಅತ್ಯಂತ ಮೌಲ್ಯಯುತವಾದ ಬ್ರ್ಯಾಂಡ್ ರಾಷ್ಟ್ರವಾಗಿ ಭಾರತಕ್ಕೆ 7 ನೇ ಸ್ಥಾನ ಲಭಿಸಿದೆ. ಭಾರತ ಬ್ರ್ಯಾಂಡ್ ಮೌಲ್ಯದಲ್ಲಿ 2.1 ಬಿಲಿಯನ್ ಡಾಲರ್ ಏರಿಕೆ ಕಂಡು ಮೌಲ್ಯದಲ್ಲಿ ಶೇ. 32 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ 8ನೇ ಸ್ಥಾನದಲ್ಲಿದ್ದ ಭಾರತದ ಬ್ರ್ಯಾಂಡ್ ಮೌಲ್ಯವು ಈ ವರ್ಷ 7ನೇ ಸ್ಥಾನಕ್ಕೇರಿದೆ.
ಬ್ರ್ಯಾಂಡ್ ಫೈನಾನ್ಸ್ ಸಿದ್ಧಪಡಿಸಿರುವ ವಿಶ್ವದ ಅತ್ಯಮೂಲ್ಯ ರಾಷ್ಟ್ರದ ಬ್ರ್ಯಾಂಡ್ಗಳಲ್ಲಿ ಅಮೇರಿಕ 19.7 ಬಿಲಿಯನ್ ಡಾಲರ್ನೊಂದಿಗೆ ಪ್ರಥಮ ಸ್ಥಾನವನ್ನು ಕಾಪಾಡಿಕೊಂಡಿದೆ. ಚೀನಾ ಹಾಗೂ ಜರ್ಮನಿ ನಂತರದ ಸ್ಥಾನಗಳಲ್ಲಿವೆ. ಯು.ಕೆ. ನಾಲ್ಕನೇ ಸ್ಥಾನದಲ್ಲಿದ್ದರೆ, ಜಪಾನ್ ಹಾಗೂ ಫ್ರಾನ್ಸ್ 5 ಮತ್ತು 6 ಸ್ಥಾನಗಳಲ್ಲಿವೆ.
ಭಾರತ ಹಾಗೂ ಫ್ರಾನ್ಸ್ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಏರಿಕೆ ಕಂಡಿದ್ದು, ಉಳಿದ ಐದು ರಾಷ್ಟ್ರಗಳು ತಮ್ಮ ಸ್ಥಾನವನ್ನು ಕಾಯ್ದುಕೊಂಡಿವೆ. ಭಾರತದ ’ರಾಷ್ಟ್ರ ಬ್ರ್ಯಾಂಡ್ ಮಾಲ್ಯ’ ಶೇ.32ರಷ್ಟು ಏರಿಕೆ ಕಂಡಿದ್ದು, ಇದು ಬ್ರ್ಯಾಂಡ್ ಫೈನಾನ್ಸ್ನ ಪಟ್ಟಿಯಲ್ಲಿ ಅತಿ ಹೆಚ್ಚು ಪ್ರಮಾಣದ ಮೌಲ್ಯ ಏರಿಕೆಯಾಗಿದೆ.
ಚೀನಾ ತನ್ನ ಮೌಲ್ಯದಲ್ಲಿ ಇಳಿಕೆ ಕಂಡರೂ ಶೇ.6.3 ಬ್ರ್ಯಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.