ಈರೋಡ್ : ದಾದ್ರಿ ಪ್ರಕರಣ ಮತ್ತು ಗೋಮಾಂಸ ಭಕ್ಷಣೆ ವಿರೋಧಿಸುವವರ ವಿರುದ್ಧ ಎಡಪಕ್ಷ ಮತ್ತು ಇತರ ಪಕ್ಷಗಳು ತಮಿಳುನಾಡಿನ ಈರೋಡ್ನಲ್ಲಿ ಪ್ರತಿಭಟನೆ ನಡೆಸಿದವು. ಈ ಸಂದರ್ಭ ಗೋ ಮಾಂಸವನ್ನು ತಿನ್ನಲಾಯಿತು.
ತಮಿಳುನಾಡು ರಾಜ್ಯ ಕೃಷಿ ಕಾರ್ಮಿಕರ ಸಂಘ ಪರವಾಗಿ ಭವಾನಿ ಸಾಗರ, ವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ಎಲ್.ಸುಂದರಂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ಸಂದರ್ಭ ಅವರು ತನ್ನ ಚೀಲದಿಂದ ಮಾಂಸವನ್ನು ಹೊರಗೆ ತೆಗೆದು ತಾನು ಗೋಮಾಂಸವನ್ನು ತಿನ್ನುತ್ತಿದ್ದೇನೆ ಎಂದು ಹೇಳಿದ್ದಾರೆ. ಮಾತ್ರವಲ್ಲ ಪ್ರತಿಭಟನಾ ನಿರತ ಇತರ ಪ್ರತಿಭಟನಾಕಾರರಿಗೂ ಗೋಮಾಂಸವನ್ನು ಹಂಚಿದರು ಎಂದು ಪೋಲೀಸರು ತಿಳಿಸಿದ್ದಾರೆ.
ಈ ಪ್ರತಿಭಟನೆಯ ಸಂದರ್ಭ ಪ್ರತಿಭಟನಾಕಾರರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.