ರಾಂಚಿ: ಸರ್ಕಾರಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಬರಹಗಾರರು, ವಿಜ್ಞಾನಿಗಳು, ಇತಿಹಾಸಕಾರರಿಗೆ ತಿರುಗೇಟು ನೀಡಿರುವ ಆರ್ಎಸ್ಎಸ್, ತಮ್ಮ ರಾಜಕೀಯ ಅಜೆಂಡಕ್ಕಾಗಿ ಇವರುಗಳು ಈ ರೀತಿ ಮಾಡುತ್ತಿದ್ದಾರೆ ಎಂದಿದೆ.
ಹತಾಶರಾಗಿ ಕೆಲವರು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಪೊಳ್ಳು ಜಾತ್ಯಾತೀತವಾದಿಗಳಿಗೆ ಆರ್ಎಸ್ಎಸ್ ಎಂದಿಗೂ ಪಂಚಿಂಗ್ ಬ್ಯಾಗ್ ಅಲ್ಲ ಎಂಬ ಎಚ್ಚರಿಕೆಯನ್ನು ಆರ್ಎಸ್ಎಸ್ನ ಸಹ ಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ನೀಡಿದ್ದಾರೆ.
ಬುದ್ಧಿಜೀವಿಗಳು ಎಂದು ಕರೆಯಲ್ಪಡುವ ಕೆಲವರು ಅಸಹಿಷ್ಣುತೆಯ ಬಗ್ಗೆ ಸುಖಾಸುಮ್ಮನೆ ಚರ್ಚೆಯನ್ನು ಆರಂಭಿಸಿದ್ದಾರೆ, ದೇಶದಲ್ಲಿ ಅಂತಹ ಯಾವುದೇ ಪರಿಸ್ಥಿತಿಗಳು ನಿರ್ಮಾಣವಾಗಿಲ್ಲ.
ಈ ಬುದ್ಧಿಜೀವಿಗಳು ಕೆಲ ಸಮಯಗಳಿಂದ ಸಾರ್ವಜನಿಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ, ಈ ಹತಾಶೆ ಅವರನ್ನು ಪಬ್ಲಿಕ್ ಗಿಮಿಕ್ ಮಾಡುವಂತೆ ಪ್ರೇರೇಪಿಸಿದೆ. ಅವರ ಅಭಿಪ್ರಾಯ ಕೇಳುವುದನ್ನು ಈ ದೇಶ ನಿಲ್ಲಿಸಿದೆ, ಹೀಗಾಗಿ ಅವರುಗಳು ತಮ್ಮನ್ನು ತಾವು ಅನರ್ಹರು ಎಂದು ಪರಿಗಣಿಸಿದ್ದಾರೆ. ರಾಷ್ಟ್ರೀಯ ಚರ್ಚೆಯ ಕೇಂದ್ರವಾಗಿರಲು ತಮ್ಮ ಪ್ರಶಸ್ತಿಗಳನ್ನು ವಾಪಾಸ್ ಮಾಡುತ್ತಿದ್ದಾರೆ’ ಎಂದು ಹೊಸಬಾಳೆ ಹೇಳಿದ್ದಾರೆ.
ರಾಷ್ಟ್ರೀಯ ಚಿಂತನೆಗಳು ಈ ದೇಶದಲ್ಲಿ ಪಸರಿಸುತ್ತಿರುವುದನ್ನು ಇವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲ ಬರಹಗಾರರ, ಸಿನಿಮಾ ನಿರ್ಮಾಪಕರ, ಇತಿಹಾಸಕಾರರ ಗುಂಪು ತಮ್ಮನ್ನು ತಾವು ಈ ದೇಶದ ಸಹಿಷ್ಣುತೆಯನ್ನು ಕಾಪಾಡುವ ಏಕಮಾತ್ರ ರಕ್ಷಕರು ಎಂದು ಪರಿಗಣಿಸಿಕೊಳ್ಳಬಾರದು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.