ಗ್ವಾಲಿಯಾರ್: ಉತ್ತರ ಭಾರತದಲ್ಲಿ ಶುಕ್ರವಾರ ವಿವಾಹವಾದ ಮಹಿಳೆಯರು ಕರ್ವಾ ಚೌತ್ ವ್ರತವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ದಿನವಿಡಿ ಉಪವಾಸವಿದ್ದು ತಮ್ಮ ಪತಿಯ ಆರೋಗ್ಯ, ಆಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಗಂಡನ ಮುಖ ನೋಡಿ ಬಳಿಕ ವ್ರತವನ್ನು ಅಂತ್ಯಗೊಳಿಸಿದ್ದಾರೆ.
ಉತ್ತರಭಾರತದಲ್ಲಿ ಇದು ಪ್ರತಿವರ್ಷ ನಡೆಯುವ ಆಚರಣೆ, ವಿವಾಹವಾದ ಮಹಿಳೆಯರು ಇದನ್ನು ತಪ್ಪದೇ ಪಾಲಿಸುತ್ತಾರೆ. ಹೀಗಾಗಿ ಜೈಲು ಹಕ್ಕಿಗಳಾಗಿರುವ ಮಹಿಳೆಯರು ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಗ್ವಾಲಿಯರ್ ಸೆಂಟ್ರಲ್ ಜೈಲು ಮಹಿಳಾ ಕೈದಿಗಳಿಗೆ ಮತ್ತು ಪುರುಷ ಕೈದಿಗಳ ಪತ್ನಿಯರಿಗೆ ಕರ್ವಾ ಚೌತ್ ಆಚರಿಸಲು ಅವಕಾಶ ನೀಡಿದೆ.
ಜೈಲು ಆವರಣದಲ್ಲಿ ವ್ರತವನ್ನು ಆಚರಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಡಲಾಗಿದ್ದು, ಮಹಿಳೆಯರು ಅಲ್ಲೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಮಧ್ಯಪ್ರದೇಶದ ಆಡಳಿತ ಇದೇ ಮೊದಲ ಬಾರಿಗೆ ಇಂತಹ ಪದ್ಧತಿಗೆ ಅನುವು ಮಾಡಿಕೊಟ್ಟಿದೆ.
ಗ್ವಾಲಿಯರ್ ಹಲವಾರು ಸುಧಾರಣಾ ಕ್ರಮಗಳಿಗೆ ಹೆಸರಾಗಿದ್ದು, ಕೈದಿಗಳಿಗೆ ಇಂಗ್ಲೀಷ್ ತರಬೇತಿ, ಶಿಕ್ಷಣವನ್ನೂ ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.