ಮುಂಬಯಿ: ಏರುತ್ತಿರುವ ’ಅಸಹಿಷ್ಣುತೆ’ಯನ್ನು ವಿರೋಧಿಸಿ ಸರ್ಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ಕಲಾವಿದರು ಹಾಗೂ ಲೇಖಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, 2006ರಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಮಹಾರಾಷ್ಟ್ರದ ಖೈರ್ಲಂಜಿ ದಲಿತರ ಹತ್ಯೆಯ ಸಂದರ್ಭ ಯಾವುದೇ ಲೇಖಕರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸದಿರುವ ಕುರಿತು ಪ್ರಶ್ನಿಸಿದ್ದಾರೆ.
ಅಲ್ಲದೇ ಕೇರಳದಲ್ಲಿ ಮೂಲಭೂತ ಮುಸ್ಲಿಂ ವರ್ಗದ ಗುಂಪೊಂದು ಪ್ರೊ. ಟಿ.ಜೆ. ಜೋಸೆಫ್ ಅವರ ಕೈ ಕಡಿದಿತ್ತು, ಈ ಸಂದರ್ಭದಲ್ಲೂ ಯಾವುದೇ ಕಲಾವಿದರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸದೇ ಇದ್ದುದನ್ನು ಪ್ರಶ್ನಿಸಿದ್ದಾರೆ.
ದಾದ್ರಿ ಮತ್ತು ಎಂ.ಎಂ. ಕಲಗುರ್ಗಿ ಹತ್ಯೆಯನ್ನು ತಾನು ಖಂಡಿಸುತ್ತಿದ್ದು, ಆದರೆ ಈ ಘಟನೆಗಳು ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷಗಳ ಅಡಿಯಲ್ಲಿ ನಡೆದಿದೆ. ಲೇಖಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಟೀಕಿಸುವಂತೆ ಕೋರುತ್ತೇನೆ. ಆದರೆ ತಮ್ಮ ಪ್ರಶಸ್ತಿಗಳನ್ನು ಮರಳಿಸುವುದು ಸರಿಯಲ್ಲ. ಲೇಖಕರು ಪಕ್ಷಪಾತ ಮಾಡದೇ ಪ್ರತಿಭಟಿಸಬೇಕು ಎಂದು ಫಡ್ನವಿಸ್ ಹೇಳಿದ್ದಾರೆ.
ಗಡಿ ನುಸುಳುವಿಕೆಗೆ ಪಾಕಿಸ್ಥಾನ ಕಾರಣವಾಗಿದೆ, ಅದು ನಮ್ಮ ಶತ್ರು ರಾಷ್ಟ್ರ ಎಂಬೂದು ನಿಜ. ಆದರೆ ಕಲಾವಿದರಿಗೆ ಯಾವುದೇ ಬೌಂಡರಿ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.