ಮುಂಬೈ : ಎಫ್.ಟಿ.ಟಿ.ಐ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಹಾಗೂ ದೇಶದಲ್ಲಿನ ಅಸಹಿಷ್ಣುತೆಯನ್ನು ವಿರೋಧಿಸಲು ಕೆಲ ಸಿನಿಮಾ ನಿರ್ಮಾಪಕರು ತಮ್ಮ ಪ್ರಶಸ್ತಿಯನ್ನು ಮರಳಿಸುತ್ತಿದ್ದಾರೆ. ಈ ಕ್ರಮವನ್ನು ಚಿತ್ರರಂಗದ ಕೆಲವರು ಖಂಡಿಸಿದ್ದು, ಇದನ್ನು ಪ್ರಚಾರದ ಗಿಮಿಕ್ ಎಂದು ಟೀಕಿಸಿದ್ದಾರೆ.
ಪ್ರಶಸ್ತಿ ವಾಪಾಸ್ ನೀಡುತ್ತಿರುವುದನ್ನು ಅನುಪಮ್ ಖೇರ್, ವಿವೇಕ್ ಅಗ್ನಿಹೋತ್ರಿ, ಮಧುರ್ ಭಂಡಾರ್ಕರ್ ವಿರೋಧಿಸಿದ್ದು, ಪ್ರಶಸ್ತಿ ವಾಪಾಸ್ ಮಾಡಿರುವವರು ತಮಗೆ ಈ ದೇಶ ನೀಡಿದ ಸನ್ಮಾನಕ್ಕೆ ಅಗೌರವ ತೋರಿದಂತಾಗಿದೆ ಎಂದು ಹೇಳಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತರು ತಮ್ಮ ಪ್ರಶಸ್ತಿಗಳನ್ನು ಮರಳಿಸುವುದು ತಮಗೆ ನೀಡಿದ ಸನ್ಮಾನಕ್ಕೆ ಅವಮಾನ ಮಾಡಿದಂತೆ ಮತ್ತು ಕಲೆ ಮತ್ತು ವಿನ್ಯಾಸ ಕೇತ್ರಕ್ಕೂ ಅವಮಾನ ಮಾಡಿದಂತೆ ಎಂದು ಭಂಡಾರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಪರೇಶ್ ಕಮಾರ್, ನಿಶಿತಾ ಜೈನ್, ಕೀರ್ತಿ ನಖ್ವ, ಹರ್ಷವರ್ಧನ್ ಕುಲಕರ್ಣಿ, ಹರಿ ನಾಯರ್, ರಾಕೇಶ್ ಶರ್ಮ ಮುಂತಾದವರು ಪ್ರಶಸ್ತಿಗಳನ್ನು ಮರಳಿಸಿದ್ದಾರೆ. ಪ್ರಶಸ್ತಿ ಮರಳಿಸುತ್ತಿರುವುದು ಪ್ರೇಕ್ಷಕರಿಗೆ, ತಂತ್ರಜ್ಞರಿಗೆ, ತೀರ್ಪುಗಾರ ಸಮಿತಿಯ ಸದಸ್ಯರಿಗೆ ಮತ್ತು ಸನ್ಮಾನ್ಯ ರಾಷ್ಟ್ರಪತಿಗಳಿಗೆ ಮಾಡುತ್ತಿರುವ ಅವಮಾನ ಎಂಬ ಟೀಕೆ ವ್ಯಕ್ತವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.