ಮುಂಬಯಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ವೃದ್ಧಾಪ್ಯದಲ್ಲಿ ತಮ್ಮ ಆದಾಯ ಸುರಕ್ಷತೆಯನ್ನು ಪಡೆದುಕೊಳ್ಳಲಿ ಎಂಬ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನಿವಾಸಿ ಭಾರತೀಯರಿಗಾಗಿ ರಾಷ್ಟ್ರೀಯ ಪೆನ್ಷನ್ ವ್ಯವಸ್ಥೆ(ಎನ್ಪಿಎಸ್)ಯ ಚಂದಾದಾರರಾಗಲು ಅನುಮತಿ ನೀಡಿದೆ.
ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ FEMA 1999 ಅಡಿಯಲ್ಲಿ ಹೂಡಿಕೆ ಆಧಾರದಲ್ಲಿ ಅನಿವಾಸಿ ಭಾರತೀಯರಿಗೆ ಪೆನ್ಷನ್ ವ್ಯವಸ್ಥೆ ಪಡೆಯಲು ಅನುಮತಿ ನೀಡಲಾಗಿದೆ ಎಂದು ಆರ್ಬಿಐ ಹೇಳಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಆಡಳಿತದ ಈ ವ್ಯವಸ್ಥೆಯಲ್ಲಿ ಎನ್ಆರ್ಐಗಳು ಚಂದಾದಾರರಾಗಲು ಅನುಮತಿ ಇದ್ದು, ಈ ವ್ಯವಸ್ಥೆಯನ್ನು ಬ್ಯಾಂಕ್ಗಳ ಸಾಮಾನ್ಯ ವ್ಯವಹಾರ ಮಾರ್ಗಗಳ ಮೂಲಕ ಹಲವು ನಿಬಂಧನೆಗಳೊಂದಿಗೆ ಹೂಡಿಕೆ ಮಾಡಬಹುದಾಗಿದೆ ಎಂದು ತಿಳಿಸಿದೆ.
ವರ್ಷಾಶನ (annuity) ಅಥವಾ ಉಳಿತಾಯ ವಾಪಸಾತಿ (accumulated savings) ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ ಎಂದು ಆರ್ಬಿಐ ಹೇಳಿದೆ. ಎನ್ಪಿಎಸ್ ವ್ಯವಸ್ಥೆಯನ್ನು ಎಲ್ಲಾ ನಾಗರಿಕರಿಗೂ ನಿವೃತ್ತಿ ಆದಾಯ ಒದಗಿಸುವ ಉದ್ದೇಶದಿಂದ ಜ.1, 2004ರಂದು ತರಲಾಗಿತ್ತು.
ಆರಂಭದಲ್ಲಿ ಎನ್ಪಿಎಸ್ ಹೊಸ ಸರ್ಕಾರ ನೇಮಕಾತಿಗಳಿಗೆ ರಚಿಸಲಾಗಿತ್ತು. ಮೇ.1, 2009ರಿಂದ ಎನ್ಪಿಎಸ್ ದೇಶದ ಎಲ್ಲಾ ನಾಗರಿಕರಿಗೂ ಒದಗಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.