ವಿಶ್ವಸಂಸ್ಥೆ: 2014ರಲ್ಲಿ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಟಿಬಿ (Tuberculosis )ರೋಗ ವರದಿಯಾಗಿರುವುದು ಭಾರತದಲ್ಲಿ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದು ಬಂದಿದೆ.
ಈ ಮೂಲಕ ಭಾರತ ಟಿಬಿ ರೋಗವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಅಂಶ ಸ್ಪಷ್ಟವಾಗಿದೆ.
ಜಗತ್ತಿನಾದ್ಯಂತ 2014ರಲ್ಲಿ 1.5 ಮಿಲಿಯನ್ ಜನ ಟಿಬಿ ರೋಗಕ್ಕೆ ಬಲಿಯಾಗಿದ್ದಾರೆ. ಇದರಲ್ಲಿ 140,000 ಮಕ್ಕಳೂ ಸೇರಿದ್ದಾರೆ. 9.6 ಮಂದಿಯಲ್ಲಿ ಈ ರೋಗದಿಂದ ಪೀಡಿತರಾಗಿದ್ದಾರೆ.
ಜಗತ್ತಿನ ಒಟ್ಟು ಟಿಬಿ ಪೀಡಿತರಲ್ಲಿ ಶೇ.58ರಷ್ಟು ಜನ ಆಗ್ನೇಯ ಏಷ್ಯಾದಲ್ಲಿ ಮತ್ತು ಪಶ್ಚಿಮ ಫೆಸಿಫಿಕ್ ಪ್ರದೇಶದಲ್ಲಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಅಂದರೆ ಶೇ.23ರಷ್ಟು, ಇಂಡೋನೇಷ್ಯಾ ಮತ್ತು ಚೀನಾದಲ್ಲಿ ತಲಾ ಶೇ.10ರಷ್ಟು ಜನ ಇದ್ದಾರೆ
ಎಚ್ಐವಿಯ ಬಳಿಕ ಅತೀ ಹೆಚ್ಚು ಜನರನ್ನು ಬಲಿಪಡೆಯುವ ರೋಗ ಇದೆಂದು ಜಗತ್ತಿನಾದ್ಯಂತ ಗುರುತಿಸಲಾಗಿದೆ. ಸಾವನ್ನು ಪರಿಣಾಮಕಾರಿ ಚಿಕಿತ್ಸೆಯಿಂದ ತಡೆಗಟ್ಟಬಹುದಾಗಿದೆ. ಆದರೆ ಭಾರತದಲ್ಲಿ ಇದು ಸಾಧ್ಯವಾಗುತ್ತಿಲ್ಲ.
ಜಗತ್ತಿನಾದ್ಯಂತ 2000-2015ರ ನಡುವಲ್ಲಿ 43 ಮಿಲಿಯನ್ ಮಂದಿ ಸೂಕ್ತ ಚಿಕಿತ್ಸೆಯಿಂದಾಗಿ ಟಿಬಿಯಿಂದ ಗುಣ ಮುಕ್ತರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.