ಬೆಂಗಳೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಪಾಕಿಸ್ಥಾನ ಅಡಗಿಸಿಟ್ಟಿಲ್ಲ ಎಂದು ಭಾರತದಲ್ಲಿನ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ಮತ್ತು ತಕ್ಷಶಿಲ ಇನ್ಸ್ಟಿಟ್ಯೂಶನ್ನ ವಿಚಾರ ವೇದಿಕೆಯಲ್ಲಿ ಮಾತನಾಡಿದ ಅವರು, ‘ದಾವೂದ್ ಪಾಕಿಸ್ಥಾನದಲ್ಲಿ ಇಲ್ಲ, ನಿಮ್ಮ ಸರ್ಕಾರಕ್ಕೂ ಆತ ಎಲ್ಲಿದ್ದಾನೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆತನ ಬಗ್ಗೆ ನಿಮ್ಮ ಬಳಿ ಯಾವುದಾದರು ಮಾಹಿತಿ ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ’ ಎಂದಿದ್ದಾರೆ.
ಭಾರತ ಒಂದು ದೊಡ್ಡ ರಾಷ್ಟ್ರ. ಹಿಂಸೆಯನ್ನು ಅಂತ್ಯಗೊಳಿಸುವುದು ಸೇರಿದಂತೆ ಅದರ ಹೆಗಲ ಮೇಲೆ ಬಹಳಷ್ಟು ಜವಾಬ್ದಾರಿಗಳಿವೆ. ಪ್ರಾಮಾಣಿಕತೆ ಮತ್ತು ಗಂಭೀರವಾಗಿ ಪಾಕಿಸ್ಥಾನ ಭಾರತದೊಂದಿಗೆ ಸಂಬಂಧ ಬೆಳೆಸಲು ಬಯಸುತ್ತದೆ ಎಂದಿದ್ದಾರೆ.
ಯಾರು ಬಯಸಲಿ ಅಥವ ಬಯಸದೇ ಇರಲಿ ಕಾಶ್ಮೀರ ಭಾರತ ಮತ್ತು ಪಾಕಿಸ್ಥಾನದ ನಡುವಣ ದೊಡ್ಡ ಸಮಸ್ಯೆ. ಅದು ಬಗೆಹರಿಯದ ವಿನಃ ಯಾವುದೇ ವಿಷಯ ಮುಂದುವರೆಯುವುದು ಸುಲಭವಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.