ಕಠ್ಮಂಡು: ನೇಪಾಳದ ಅಧ್ಯಕ್ಷೆಯಾಗಿ ಬಿದ್ಯಾ ಭಂಡಾರಿಯವರನ್ನು ಬುಧವಾರ ಅಲ್ಲಿನ ಸಂಸತ್ತು ಆಯ್ಕೆ ಮಾಡಿದೆ. ಈ ಮೂಲಕ ನೇಪಾಳದಲ್ಲಿ ಮೊತ್ತ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ.
ಪ್ರಸ್ತುತ ಭಂಡಾರಿಯವರು ಆಡಳಿತಾರೂಢ ಕಮ್ಯೂನಿಸ್ಟ್ ಪಾರ್ಟಿ ಆಫ್ ನೇಪಾಳದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೇಪಾಳಿ ಕಾಂಗ್ರೆಸ್ ಪಕ್ಷದ ಕುಲ್ ಬಹದ್ದೂರ್ ಗುರುಂಗ್ ಅವರನ್ನು ಸೋಲಿಸಿ ಅವರು ಅಧ್ಯಕ್ಷೆಯಾಗಿದ್ದಾರೆ.
ಕುಲ್ ಅವರು 214 ಮತಗಳನ್ನು ಪಡೆದರೆ, ಭಂಡಾರಿಯವರು 327 ಮತ ಪಡೆದಿದ್ದಾರೆ.
ಇತ್ತೀಚಿಗಷ್ಟೇ ನೇಪಾಳದಲ್ಲಿ ನೂತನ ಸಂವಿಧಾನ ಅಸ್ತಿತ್ವಕ್ಕೆ ಬಂದಿದ್ದು, ಸರ್ಕಾರವೂ ಬದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.