ಮುಂಬಯಿ: ಭಾರತ ಕಳೆದ ಒಂಬತ್ತು ತಿಂಗಳಲ್ಲಿ 642 ಟನ್ಗಳಷ್ಟು ಚಿನ್ನ ಬಳಕೆ ಮಾಡಿದೆ. ಈ ಮೂಲಕ ಚಿನ್ನದ ಬಳಕೆಯಲ್ಲಿ ಚೀನಾವನ್ನು ಹಿಂದಿಕ್ಕಿ ಬಳಕೆದಾರರ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ ಎಂದುಸಮೀಕ್ಷೆಯಿಂದ ತಿಳಿದು ಬಂದಿದೆ.
ಚೀನಾ ಒಟ್ಟು 579 ಟನ್ ಬಳಕೆಯೊಂದಿಗೆ ಕೇವಲ 63 ಟನ್ಗಳಷ್ಟು ಪ್ರಮಾಣದಲ್ಲಿ ಹಿಂದುಳಿದಿದೆ ಎಂದು ಜಿ.ಎಫ್.ಎಸ್.ಎಂ.ನ Gold Survey Q3 2015 ಹೇಳಿದೆ. ಭಾರತದಲ್ಲಿ 2011 ಮೊದಲ ತ್ರೈಮಾಸಿಕದಿಂದ 2015ರ ಮೂರನೇ ತ್ರೈಮಾಸಿಕದಲ್ಲಿ ಶೇ.5ರಂತೆ 193 ಟನ್ಗಳಷ್ಟು ಆಭರಣ ಬಳಕೆಯಾಗಿದೆ. ಇದು 2008ರ ಬಳಿಕ ಅತ್ಯಧಿಕ ಆಭರಣ ಬಳಕೆಯಾಗಿದೆ ಎಂದು ಥಾಮ್ಸನ್ ರಾಯ್ಟರ್ಸ್ ವರದಿ ಮಾಡಿದೆ.
2013ರ ನಾಲ್ಕನೇ ತ್ರೈಮಾಸಿಕದಿಂದ ಈವರೆಗೆ ಚಿಲ್ಲರೆ ವ್ಯಾಪಾರ ಹೂಡಿಕೆಯಲ್ಲಿ ಶೇ.30ರಂತೆ 55 ಟನ್ಗೆ ಏರಿಕೆಯಾಗಿದೆ. ಆಗಸ್ಟ್ 2011ರ ನಂತರ ಭಾರತದಲ್ಲಿ ಈ ವರ್ಷ ಆಭರಣಗಳ ಬೆಲೆ ಅತ್ಯಂತ ಕಡಿಮೆಯಾಗಿರುವುದು ಬಳಕೆಯಲ್ಲಿ ಏರಿಕೆಯಾಗಲು ಕಾರಣ ಎನ್ನಲಾಗಿದೆ.
ಇನ್ನು ಚೀನಾದಲ್ಲಿ 2011ರ ನಾಲ್ಕನೇ ತ್ರೈಮಾಸಿಕದ ಬಳಿಕ ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಚಿನ್ನ ಬಳಕೆಯಾಗಿದ್ದು, ಮೂರನೆ ತ್ರೈಮಾಸಿಕದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ. ಇದರೊಂದಿಗೆ ಶೇ.3ರಂತೆ ಒಟ್ಟು ಬೇಡಿಕೆ 196 ಟನ್ಗಳಿಗೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.