ವಾಷಿಂಗ್ಟನ್: ಅತೀ ಸುಲಭದಲ್ಲಿ ವ್ಯಾಪಾರೋದ್ಯಮ ಆರಂಭಿಸುವ 189 ದೇಶಗಳ ಪೈಕಿ ಭಾರತಕ್ಕೆ 130ನೇ ರ್ಯಾಂಕ್ ಸಿಕ್ಕಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಈ ಬಾರಿ 12 ಸ್ಥಾನಗಳ ಜಿಗಿತವನ್ನು ಕಂಡಿದೆ.
ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿರುವ ‘ಡೂಯಿಂಗ್ ಬ್ಯುಸಿನೆಸ್ 2016’ ವರದಿಯಲ್ಲಿ ಭಾರತ 130ನೇ ರ್ಯಾಂಕ್ ಪಡೆದುಕೊಂಡಿದೆ. ಇದರಿಂದಾಗಿ ಭಾರತವನ್ನು ಹೂಡಿಕೆ ಸ್ನೇಹಿಯನ್ನಾಗಿಸಬೇಕೆಂಬ ನರೇಂದ್ರ ಮೋದಿ ಸರ್ಕಾರದ ಆಶಯಕ್ಕೆ ಮತ್ತಷ್ಟು ಪ್ರೇರಣೆ ಸಿಕ್ಕಂತಾಗಿದೆ.
2014ರಲ್ಲಿ ಭಾರತ 142 ಸ್ಥಾನದಲ್ಲಿತ್ತು, ಬಳಿಕದ ವರದಿಯಲ್ಲಿ 134ರ ಏರಿಕೆ ಕಂಡಿತ್ತು. ಇದೀಗ ಅಧಿಕೃತ ವರದಿಯಲ್ಲಿ ಅದು 130ನೇ ಸ್ಥಾನ ಪಡೆದಿದೆ. ವ್ಯಾಪಾರೋದ್ಯಮ ಆರಂಭಕ್ಕೆ ಅಗತ್ಯವಾಗಿದ್ದ ಕೆಲವೊಂದು ಪ್ರಕ್ರಿಯೆಗಳ ಸರಳಗೊಳಿಸಿದ್ದು, ಮುಂದಿನ ದಿನಗಳಲ್ಲಿ 50ರೊಳಗಿನ ಸ್ಥಾನ ಪಡೆಯಬೇಕೆಂಬುದು ಮೋದಿ ಸರ್ಕಾರದ ಗುರಿ ಎನ್ನಲಾಗಿದೆ.
ಈಗಲೂ ಭಾರತದಲ್ಲಿ ಹೊಸ ಉದ್ಯಮ ಆರಂಭಿಸಲು 29 ದಿನಗಳ ಅಗತ್ಯವಿದೆ ಮತ್ತು 12 ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
ಈ ಪಟ್ಟಿಯಲ್ಲಿ ಚೀನಾ 86ನೇ ಸ್ಥಾನದಲ್ಲಿದ್ದು, ಆರು ಸ್ಥಾನಗಳ ಜಿಗಿತ ಕಂಡಿದೆ. ಸಿಂಗಾಪುರ, ನ್ಯೂಜಿಲ್ಯಾಂಡ್, ಡೆನ್ಮಾರ್ಕ್ ಅಗ್ರ ಸ್ಥಾನದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.