ಭೋಪಾಲ್: ದೇಶದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತೆಯರ ಮೇಲಿನ ಅತ್ಯಾಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನೋಬೆಲ್ ಪುರಸ್ಕೃತ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ, ದೇಶದಲ್ಲಿ ಹೆಣ್ಣುಮಕ್ಕಳು ಸುರಕ್ಷಿತರಲ್ಲ ಎಂದು ಹೇಳಿದ್ದಾರೆ.
ನಮ್ಮ ದೇಶದಲ್ಲಿ ಉಸಿರಾಡುತ್ತಿರುವ ದೇವತೆಗಳು ಸುರಕ್ಷಿತರಾಗಿಲ್ಲ, ಅಂತಹುದರಲ್ಲಿ ದೇವತೆಗಳನ್ನು, ಹೆಣ್ಣಮಕ್ಕಳನ್ನು ನಾವು ಪೂಜಿಸುತ್ತಿದ್ದೇವೆ ಎಂದು ನೈತಿಕ ವಾದ ಮಾಡುವುದರಲ್ಲಿ ಯಾವ ಅರ್ಥವಿದೆ? ಕ್ಯಾಂಡಲ್ ಹಿಡಿದು ಇಂಡಿಯಾ ಗೇಟ್ವರೆಗೆ ಹೋಗುವುದರಿಂದ ಏನೂ ಆಗದು. ಇದು ಸ್ವೀಕಾರರ್ಹವಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ, ನೆರೆಹೊರೆಯಲ್ಲಾಗಲಿ, ಪೊಲೀಸ್ ಸ್ಟೇಶನ್ನಿನಲ್ಲಾಗಲಿ ಹೆಣ್ಣುಮಕ್ಕಳು ಸೇಫ್ ಆಗಿಲ್ಲ, ಅವರು ಭಯಭೀತರಾಗಿದ್ದಾರೆ. ಭಯವೇ ನಮ್ಮನ್ನು ಚಾಲನೆ ಮಾಡುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.