ಪಾಟ್ನಾ: ಮೀಸಲಾತಿಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳುತ್ತಿದ್ದಾರೆ, ಅವರು ತಮ್ಮ ಮಾತಿಗೆ ಬದ್ಧವಾಗಿರುವುದೇ ಆದರೆ ಆರ್ಎಸ್ಎಸ್ ಸರಸಂಘಚಾಲಕರಾಗಿದ್ದ ಎಂ.ಎಸ್. ಗೋಳ್ವಲ್ಕರ್ ಅವರು ಬರೆದ ‘ಬಂಚ್ ಆಫ್ ಥಾಟ್ಸ್’ ಪುಸ್ತಕವನ್ನು ಸುಟ್ಟು ಹಾಕಲಿ ಎಂದು ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಸವಾಲೊಡ್ಡಿದ್ದಾರೆ.
ಚುನಾವಣಾ ಸಮಾವೇಶದ ವೇಳೆ ಮೋದಿಯವರು ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದ್ದರು. ಆದರೆ ಅವರ ಈ ಮಾತು ಬಿಜೆಪಿ ಮೀಸಲಾತಿಯ ವಿರುದ್ಧವಾಗಿದೆ ಎಂದು ಪ್ರಚಾರ ಮಾಡುತ್ತಿದ್ದ ಲಾಲೂ ಮತ್ತು ಅವರ ಸಂಗಡಿಗರಿಗೆ ತೀವ್ರ ಹೊಡೆತ ನೀಡಿದೆ. ಇದರಿಂದಾಗಿ ಆರ್ಎಸ್ಎಸ್ನ್ನು ಮಧ್ಯೆ ಎಳೆ ತಂದು ಮತ್ತೊಂದು ರೀತಿಯ ಪ್ರಚಾರಕ್ಕೆ ಮುಂದಾಗಿದ್ದಾರೆ.
ಮೋದಿ ತಮ್ಮ ಮಾತಿಗೆ ಬದ್ಧರಾಗಿಲ್ಲ, ಊಸರವಳ್ಳಿಯಂತೆ ಅವರು ಬಣ್ಣ ಬದಲಾಯಿಸುತ್ತಿದ್ದಾರೆ, ಒಂದು ವೇಳೆ ಅವರು ಮೀಸಲಾತಿಗೆ ಬದ್ಧವಾಗಿರುವುದೇ ಆದರೆ ಗೋಳ್ವಲ್ಕರ್ ಅವರು ಮೀಸಲಾತಿ ವಿರುದ್ಧವಾಗಿ ಬರೆದಿರುವ ಪುಸ್ತಕವನ್ನು ಸಾರ್ವಜನಿಕವಾಗಿ ಸುಟ್ಟು ಹಾಕಲಿ. ಅವರ ಪುಸ್ತಕ ಡಾ.ಬಿ.ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅವಮಾನವನ್ನೂ ಮಾಡಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ಆರ್ಜೆಡಿ, ಜೆಡಿಯು, ಕಾಂಗ್ರೆಸ್ ಮೀಸಲಾತಿಯನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಮಣಿಸಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.