ನವದೆಹಲಿ: ಆಕಸ್ಮಿಕವಾಗಿ ಪಾಕಿಸ್ಥಾನ ಸೇರಿ 13 ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಕಿವಿ ಕೇಳದ ಮತ್ತು ಮಾತು ಬಾರದ ಯುವತಿ ಗೀತಾ ತನ್ನ ಕುಟುಂಬವನ್ನು ಗುರುತಿಸುವಲ್ಲಿ ವಿಫಲಳಾಗಿದ್ದಾಳೆ.
ಬಿಹಾರದ ಮಹೆಂತೋ ಅವರು ಆಕೆಯ ತಂದೆ ಎಂದು ಹೇಳಿಕೊಂಡಿದ್ದರು, ಗೀತಾ ಕೂಡ ಅವರನ್ನು ಗುರುತಿಸಿದ್ದಳು ಎಂದು ಹೇಳಲಾಗಿತ್ತು. ಆದರೀಗ ಭಾರತಕ್ಕೆ ಬಂದಿಳಿದಿರುವ ಅವಳು ಮಹೆಂತೋ ತನ್ನ ತಂದೆಯಲ್ಲ ಎಂದಿದ್ದಾಳೆ.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಮೆಹಂತೋ ಅವರ ಡಿಎನ್ಎ ಟೆಸ್ಟ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಗೀತಾಳಿಗೆ ತನ್ನ ಹಳೆಯ ನೆನಪು ಬರುವಂತೆ ಮಾಡಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಇತರ ನಾಲ್ಕು ಕುಟುಂಬಗಳು ಗೀತಾ ತಮ್ಮ ಮಗಳು ಎಂದು ಹೇಳಿಕೊಂಡಿದ್ದು, ಆ ಬಗ್ಗೆಯೂ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಇನ್ನೊಂದೆಡೆ ಗೀತಾ ಭಾರತಕ್ಕೆ ಬರುತ್ತಿದ್ದಂತೆ ಹೇಳಿಕೆ ನೀಡಿರುವ ಪಾಕಿಸ್ಥಾನ, ಭಾರತದಲ್ಲಿರುವ 450 ಪಾಕ್ ಮೀನುಗಾರರನ್ನು ಬಿಡುಗಡೆಗೊಳಿಸಿ ಎಂದು ಒತ್ತಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.